JDS ಕಳ್ಳರ ಪಕ್ಷ ಅಂದಿಲ್ಲ, ಸಾಕ್ಷ್ಯ ತೋರಿಸಿದ್ರೆ ಏನ್ ಹೇಳಿದ್ರೂ ಕೇಳ್ತೀನಿ: ಯಶ್​ ಸ್ಪಷ್ಟನೆ

 ಮಂಡ್ಯ: ನಾನೆಂದೂ ಜೆಡಿಎಸ್ ಪಕ್ಷವನ್ನು ಕಳ್ಳರ ಪಕ್ಷ ಅಂದಿಲ್ಲ. ಯಾರಾದರೂ ಒಬ್ರು ನಾನು ಆ ಮಾತಾಡಿದ್ದೀನಿ ಅಂತಾ ಸಾಕ್ಷ್ಯ ತೋರಿಸಿದ್ರೆ ಅವರು ಏನ್ ಹೇಳಿದ್ರೂ ಕೇಳ್ತೀನಿ ಅಂತಾ ರಾಕಿಂಗ್​ ಸ್ಟಾರ್​ ಯಶ್ ಸ್ಪಷ್ಟನೆ  ನೀಡಿದ್ದಾರೆ.

ಜಿಲ್ಲೆಯ ದ್ಯಾಪಸಂದ್ರ ಗ್ರಾಮದಲ್ಲಿ ಪ್ರಚಾರದ ವೇಳೆ ಮಾತನಾಡಿದ ಯಶ್, ಮೊದಲನೆಯದಾಗಿ ಜೆಡಿಎಸ್ ಪಕ್ಷದಲ್ಲೂ ನನಗೆ ಸಾಕಷ್ಟು ಜನ‌ ಸ್ನೇಹಿತರಿದ್ದಾರೆ. ಹಾಗಿದ್ರೆ ನಾನು ಅವರ ಪಕ್ಷಕ್ಕೆ ಪ್ರಚಾರಕ್ಕೆ ಹೋಗ್ತಿದ್ನಾ? ಈ ವಿಚಾರದಲ್ಲಿ ಯಾರೋ ಸಿಎಂ‌ ಕುಮಾರಸ್ವಾಮಿಗೆ ಚಾಡಿ ಹೇಳಿ ಮಿಸ್ ಗೈಡ್ ಮಾಡಿರಬೇಕು. ಈಗ ಅವ್ರು ಬ್ಯುಸಿಯಾಗಿರಬೇಕು. ಕನ್ಪ್ಯೂಸ್  ಆಗಿರಬೇಕು ಬಿಡುವಾದಾಗ ವಿಷಯದ ಬಗ್ಗೆ ಯೋಚಿಸಲಿ. ಸುಮ್ ಸುಮ್ಮನೆ ನಾನು ಆಡದೆ ಇರೋ ಮಾತುಗಳನ್ನು‌ ನಾನು ಒಪ್ಪಿಕೊಳ್ಳಲ್ಲ. ಅವರ ಪಕ್ಷದಲ್ಲೆ ಸಾಕಷ್ಟು ರೀತಿ ಬೇರೆ ಬೇರೆ ಮಾತನಾಡ್ತಿದ್ದಾರೆ ಎಂದು ಯಶ್​ ಹೇಳಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv