ಮಂಗಳೂರು: ದಕ್ಷಿಣ ಭಾರತದ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಪ್ರಸಿದ್ಧ ಧರ್ಮಸ್ಥಳದ ಮಂಜುನಾಥೇಶ್ವರ ಕ್ಷೇತ್ರದ ನೇತ್ರಾವತಿ ನದಿ ಕಸ ಕಡ್ಡಿಗಳಿಂದ ತುಂಬಿ‌ ಹೋಗಿತ್ತು, ಸ್ನಾನಕ್ಕೆಂದು ನದಿಗೆ ಬಂದವರು ಅಲ್ಲೇ ಬಟ್ಟೆ ಇತ್ಯಾದಿ ವಸ್ತುಗಳನ್ನು ಎಸೆದು ನದಿಯನ್ನು ಮಲೀನಗೊಂಡಿತ್ತು. ಇದನ್ನರಿತ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಧರ್ಮಸ್ಥಳದ ನೇತ್ರಾವತಿ ನದಿ ಶುದ್ಧೀಕರಣ ನಡೆಯಿತು. ಸೂಲಿಬೆಲೆ ಅವರ ಜೊತೆ ನೂರಾರು ಜನ ನದಿ ಶುದ್ಧೀಕರಣ ಕಾರ್ಯದಲ್ಲಿ ತೊಡಗಿಕೊಂಡರು. ನಿನ್ನೆ ಬೆಳಗ್ಗಿನಿಂದ ನಡೆದ ಶುದ್ದೀಕರಣದಲ್ಲಿ ಒಟ್ಟು 13ಕ್ಕೂ ಹೆಚ್ಚು ಲೋಡ್​ಗಳಷ್ಟು ಕಸ ಸಂಗ್ರಹವಾಯಿತು.
ಸ್ವಚ್ಚತಾ ಕಾರ್ಯದಲ್ಲಿ ಐದು ಮಂದಿಗೆ ಸಣ್ಣ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗಿದೆ. ಸ್ವಚ್ಚತಾ ಕಾರ್ಯ ನಡೆಯುತ್ತಿದ್ದಲ್ಲಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಹಾಗೂ ಹೆಗ್ಗಡೆಯವರ ತಮ್ಮ ಹಷೇಂದ್ರ ಕುಮಾರ್ ಭೇಟಿ ನೀಡಿ ಮಹತ್ವದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿ ಕಾರ್ಯಕರ್ತರನ್ನು ಹುರಿದುಂಬಿಸಿದರು. ಒಟ್ಟು 5೦೦ ಕ್ಕೂ ಮಿಕ್ಕಿ ಕಾರ್ಯಕರ್ತರು ಸ್ವಚ್ಚತಾ ಕಾರ್ಯದಲ್ಲಿ ತೊಡಗಿದ್ರು. ಅದರಲ್ಲಿ ಡಾಕ್ಟರ್ ಎಂಜಿನಿಯರ್, ವಿಜ್ಞಾನಿಗಳು, ವ್ಯಾಪಾರಸ್ಥರು ಪಾಲುಗೊಂಡಿದ್ದು ವಿಶೇಷವಾಗಿತ್ತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv