ಮೌಂಟ್​ ಎವರೆಸ್ಟ್​ ಎತ್ತರ ಅಳತೆ ಮಾಡಲು ಹೊರಟ ನೇಪಾಳ

ಖಠ್ಮಂಡು: ​ ಪ್ರಪಂಚದ ಅತಿ ಎತ್ತರದ ಪರ್ವತ ಮೌಂಟ್​ ಎವರೆಸ್ಟ್ ಎತ್ತರವನ್ನು ಮತ್ತೊಮ್ಮೆ ಅಳತೆ ಮಾಡಲು ನೇಪಾಳ ನಿರ್ಧರಿಸಿದೆ. 1954ರಲ್ಲಿ ಭಾರತ ಮೌಂಟ್ ಎವರೆಸ್ಟ್​ನ ಎತ್ತರ ಅಳತೆ ಮಾಡಿದಾಗ 8,848 ಮೀಟರ್​ಗಳಷ್ಟು ಎತ್ತರವಿತ್ತು. ಆದ್ರೆ 2015ರಲ್ಲಿ ನೇಪಾಳದಲ್ಲಿ ಭೂಕಂಪ ಸಂಭವಿಸಿದ್ದರಿಂದ ​ ಎತ್ತರ ಕೊಂಚ ಕಡಿಮೆಯಾಗಿದೆ ಅಂತಾ ವಿಜ್ಞಾನಿಗಳು ಸಂಶಯ ವ್ಯಕ್ತಪಡಿಸಿದ್ದರು. ಹೀಗಾಗಿ ನೇಪಾಳ ಸರ್ಕಾರ ಎತ್ತರ ಅಳತೆ ಮಾಡಲು ನುರಿತ ಪರ್ವತಾರೋಹಿಗಳ ತಂಡವನ್ನು ನೇಮಿಸಿದೆ. ಇನ್ನು ಎತ್ತರವನ್ನು ಸಮೀಕ್ಷೆ ಮಾಡಲಿರುವ ನಾಲ್ವರು ಸಮೀಕ್ಷಕರು 2 ವರ್ಷಗಳಿಂದ ಸಮೀಕ್ಷೆ ನಡೆಸುವ ವಿಧಾನ ಹಾಗೂ ಎವರೆಸ್ಟ್​ನ ವಾತಾವರಣ ಎದುರಿಸಲು ಸಮರ್ಥವಾಗಿ ತರಬೇತಿ ಪಡೆದುಕೊಂಡಿದ್ದಾರಂತೆ. ಇಲ್ಲಿಯವರೆಗೂ ನೇಪಾಳ ಮೌಂಟ್​ ಎವರೆಸ್ಟ್​ನ ಎತ್ತರ ಅಳತೆ ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ಈ ಸಾಹಸ ಕೈಗೊಂಡಿದೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv