ಮನೆಗಳ್ಳತನ ಮಾಡುತ್ತಿದ್ದ ನೇಪಾಳ ಮೂಲದ ಇಬ್ಬರು ಕಳ್ಳರ ಬಂಧನ

ದಾವಣಗೆರೆ: ಜಿಲ್ಲೆ ಸೇರಿದಂತೆ ಶಿವಮೊಗ್ಗ ಹಾಗೂ ಹಾವೇರಿ ಜಿಲ್ಲೆಯಲ್ಲಿ ಮನೆಗಳ್ಳತನ ಮಾಡುತ್ತಿದ್ದ ಕಳ್ಳರನ್ನ ‌ಪೊಲೀಸರು ಬಂಧಿಸಿದ್ದಾರೆ. ನಗರದ ಬಡಾವಣೆ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ನೇಪಾಳ ಮೂಲದ ತಿಲಕ್​(21) ಹಾಗೂ ಅಶೋಕ ಸಿಂಗ್ (26) ಎಂಬ ಆರೋಪಿಗಳನ್ನ ಬಂಧಿಸಿದ್ದಾರೆ. ದಾವಣಗೆರೆಯ ಹರಿಹರ ರಸ್ತೆಯಲ್ಲಿ ಕಳ್ಳತನಕ್ಕೆ ಯೋಜನೆ ರೂಪಿಸಿ ಕುಳಿತ್ತಿದ್ದ ಆರೋಪಿಗಳನ್ನ ಖಚಿತ ಮಾಹಿತಿ ಆಧರಿಸಿ ಪೊಲೀಸರು ಭಲೆ ಬಿಸಿದ್ದಾರೆ.

ಬಂಧಿತರಿಂದ 3 ಲಕ್ಷದ 30 ಸಾವಿರ ರೂಪಾಯಿ ನಗದು ಹಾಗೂ 110 ಗ್ರಾಂ ಬಂಗಾರದ ಒಡವೆಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆ 5 ಪ್ರಕರಣಗಳು ಹಾಗೂ ಬಡಾವಣೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು. ದಾವಣಗೆರೆ, ಶಿವಮೊಗ್ಗ, ಉಡುಪಿ ಜಿಲ್ಲೆಗಳಲ್ಲಿ ಕಳ್ಳತನ ಮಾಡುತ್ತಿದ್ದರು.