ದ್ವಿತೀಯ ಪಿ.ಯು ಫಲಿತಾಂಶ: ನಟ ಪ್ರೇಮ್​ ಮಗಳ ಸಾಧನೆ..!

ಸೆಲೆಬ್ರಿಟಿ ಮಕ್ಕಳು ಅಂದಾಕ್ಷಣ ಎಲ್ಲರ ನೋಟವೂ ದೊಡ್ಡದಿರುತ್ತೆ. ಅದ್ರಲ್ಲೂ ಸಿನಿಮಾ ನಟರ ಮಕ್ಕಳೆಂದರೆ ಕುತೂಹಲ ಜಾಸ್ತಿ. ಬಹುತೇಕ ನಟರ ಮಕ್ಕಳು ಸಿನಿಮಾದಲ್ಲಿಯೇ ತೊಡಗಿಕೊಳ್ತಾರೆ. ಆದರೆ ಕೆಲವರಷ್ಟೇ ತಮ್ಮದೇ ಹಾದಿ ಸೃಷ್ಟಿಸಿಕೊಳ್ಳುತ್ತಾರೆ. ಅಂಥವರಲ್ಲಿ ‘ನೆನಪಿರಲಿ’ ಪ್ರೇಮ್​ ಕುಟುಂಬ ಕೂಡ ಹೌದು. ಪ್ರೇಮ್​ ಪುತ್ರಿ ಅಮೃತಾ ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದಿದ್ದು, ಈ ಮೂಲಕ ತಂದೆ- ತಾಯಿಯ ಕೀರ್ತಿ ಹೆಚ್ಚಿಸಿದ್ದಾರೆ.
ಶೇ.91 ಸಾಧನೆ..!
ಪ್ರೇಮ್ ಪುತ್ರಿ ಅಮೃತಾ.. ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲೂ ಅತ್ಯುತ್ತಮ ಅಂಕ ಗಳಿಸಿದ್ದರು. ಇದೀಗ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ.91ರಷ್ಟು ಅಂಕಗಳಿಸಿ ಗಮನ ಸೆಳೆದಿದ್ದಾರೆ. ಈ ಖುಷಿಯನ್ನು ಪ್ರೇಮ್​ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪ್ರೇಮ್​ ಪುತ್ರ ಕೂಡ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಶಾಲಾ ಱಂಕಿಂಗ್ ಪಡೆದಿದ್ದಾರೆ.