ಇತಿಹಾಸದಲ್ಲೇ ಮೊದಲ ಬಾರಿಗೆ ಕಳಸಾದ ನೆಲ್ಲಿ ಬೀಡು ಸೇತುವೆ ಮುಳುಗಡೆ.!

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಚಿಕ್ಕಮಗಳೂರು-ಮಂಗಲೂರು ಮಾರ್ಗವೂ ಬಂದ್‌ ಆಗಿದೆ. ಚಾರ್ಮಾಡಿ ರಸ್ತೆ ಬಂದ್ ಆದ ಮೇಲೆ ಕುದುರೆ ಮುಖ ಮಾರ್ಗವಾಗಿ ವಾಹನಗಳೂ ಚಲಿಸುತ್ತಿದ್ದವು. ಇದೀಗ ಕುದುರೆ ಮುಖ ಮಾರ್ಗವೂ ಜಲಾವೃತವಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಕಳಸಾದ ನೆಲ್ಲಿ ಬೀಡು ಸೇತುವೆ ಮುಳುಗಡೆಯಾಗಿದೆ.ಶೃಂಗೇರಿಯ ಎಸ್‌.ಕೆ.ಬಾರ್ಡ್‌ ರಸ್ತೆಯಲ್ಲಿ ಮಣ್ಮು ಕುಸಿತವಾಗಿದೆ.
ಮಳೆಯ ಹಿನ್ನೆಲೆ ಶೃಂಗೇರಿ, ಕೊಪ್ಪ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆಯಾಗಿದೆ. ಭದ್ರಾ, ತುಂಗಾ, ಹೇಮಾವತಿ ನದಿಗಳ ಒಳಹರಿವು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಚಾರ್ಮಾಡಿ ಘಾಟ್ ಸೇರಿ ಹಲವು ಕಡೆಗಳಲ್ಲಿ ಮತ್ತೆ ಭೂ ಕುಸಿತವಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ:contact@firstnews.tv