ಹಾವೇರಿ ಬಿಜೆಪಿಯಲ್ಲಿ ಭಿನ್ನಮತ: ಓಲೇಕಾರ್‌ ವಿರುದ್ಧ ಭುಗಿಲೆದ್ದ ಆಕ್ರೋಶ

ಹಾವೇರಿ: ಬಿಜೆಪಿ ಇಂದು ಅಭ್ಯರ್ಥಿಗಳ 3 ನೇ ಪಟ್ಟಿ ರಿಲೀಸ್‌​ ಮಾಡಿದೆ. ಹಾವೇರಿ ಮೀಸಲು ಕ್ಷೇತ್ರದಿಂದ ನೆಹರು ಓಲೇಕಾರ್​​ಗೆ ಟಿಕೆಟ್​​ ಘೋಷಣೆ ಮಾಡಿದ್ದು, ಭಿನ್ನಮತ ಭುಗಿಲೆದ್ದಿದೆ. ಟಿಕೆಟ್​​ ಘೋಷಣೆಗೂ ಮೊದಲೇ ಹಾವೇರಿ ಜಿಲ್ಲಾ ಬಿಜೆಪಿ ಪಾಳಯದಲ್ಲಿ ಭಿನ್ನಮತ ಸ್ಪೋಟಗೊಂಡಿತ್ತು. ಹಾವೇರಿ ಮೀಸಲು ಕ್ಷೇತ್ರದಲ್ಲಿ ಒಟ್ಟು 12 ಜನ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಗಳಿದ್ದರು. ಈ ಪೈಕಿ ಯಾರಿಗೆ ಕೊಟ್ಟರು ಗೆಲ್ಲಿಸಲು ನಾವು ರೆಡಿ. ಆದರೆ ನೆಹರು ಓಲೇಕಾರ್​ಗೆ ಮಾತ್ರ ಟಿಕೆಟ್​ ನೀಡಬಾರದು ಅಂತಾ ಶಿವರಾಜ್​​ ಸಜ್ಜನ್ ಬೆಂಬಲಿಗರು ಪಟ್ಟು ಹಿಡಿದಿದ್ದರು. ಅಲ್ಲದೇ ಶಿವರಾಜ್​ ಸಜ್ಜನ ಹೇಳಿದ ಅಭ್ಯರ್ಥಿಗೆ ಟಿಕೆಟ್​​ ನೀಡಿದರೂ ನಮಗೆ ಒಪ್ಪಿಗೆ ಇದೆ. ಆದರೆ ಓಲೇಕಾರ್​ಗೆ ಮಾತ್ರ ಟಿಕೆಟ್ ನೀಡುವಂತಿಲ್ಲ. ಹಾಗೇನಾದ್ರೂ ಟಿಕೆಟ್​​ ನೀಡಿದ್ದೆ ಆದಲ್ಲಿ ನಮ್ಮ ಮುಂದಿನ ನಿರ್ಧಾರ ಬೇರೆನೇ ಆಗಿರುತ್ತೆ ಅಂತಾ ಶಿವರಾಜ್​ ಸಜ್ಜನ್​ ಬೆಂಬಲಿಗರು ಎಚ್ಚರಿಕೆ ನೀಡಿದ್ರು. ಆದರೆ ಈಗ ಬಿಜೆಪಿ 3 ನೇ ಲಿಸ್ಟ್​​ನಲ್ಲಿ ಓಲೇಕಾರ್​ ಅಧಿಕೃತ ಅಭ್ಯರ್ಥಿಯಾಗಿದ್ದಾರೆ. ಹೀಗಾಗಿ ಶಿವರಾಜ್​ ಸಜ್ಜನ್​ ಬೆಂಬಲಿಗರಿಗೆ ಅಸಮಾಧಾನ ಉಂಟಾಗಿದ್ದು, ಹಾವೇರಿ ಜಿಲ್ಲಾ ಬಿಜೆಪಿ ಪಾಳಯದಲ್ಲಿ ಭಿನ್ನಮತ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *