ಕಾರ್ಯಾಚರಣೆ ಬಳಿಕ ನುಗ್ಗಿಕೇರಿ ಹನುಮಂತನ ದರ್ಶನ ಪಡೆದ ಎನ್‌ಡಿಆರ್‌ಎಫ್‌ ಸಿಬ್ಬಂದಿ

ಧಾರವಾಡ: ಧಾರವಾಡ ಕಟ್ಟಡ ಕುಸಿತದಿಂದ ಅವಷೇಷಗಳ ಅಡಿ ಸಿಲುಕಿದ್ದ ಹಲವು ಜನರನ್ನು ರಕ್ಷಣೆ ಮಾಡಿದ್ದ ಎನ್‌ಡಿಆರ್‌ಎಫ್‌ ಸಿಬ್ಬಂದಿ ನುಗ್ಗಿಕೇರಿ ಹನುಮಂತ ದೇವರಿಗೆ ನಮನ ಸಲ್ಲಿಸಿದರು. 7 ದಿನಗಳವರೆಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಸಿಬ್ಬಂದಿ, ಕಾರ್ಯಾಚರಣೆ ಮುಗಿಸಿ ಗಾಜಿಯಾಬಾದ್ ಮರಳುವ ಮುನ್ನ, ನುಗ್ಗಿಕೇರಿ ಹನುಮಂತನ ದರ್ಶನ ಪಡೆದಿದ್ದಾರೆ. ಧಾರವಾಡ ಹೊರವಲಯದ ನುಗ್ಗಿಕೇರಿಯಲ್ಲಿ ಪುರಾಣ ಪ್ರಸಿದ್ಧ ಹನುಮಂತ ದೇವಸ್ಥಾನವಿದೆ. ಎನ್‌ಡಿ‌ಆರ್‌ಎಫ್ ಶ್ವಾನಗಳು ಸಹ ಹನುಮಂತನಿಗೆ ವಿಶೇಷ ನಮನ ಸಲ್ಲಿಸಿದ್ವು. ಮಾ. 19ರಂದು ಕಟ್ಟಡ ಕುಸಿತ ಪ್ರಕರಣ ನಡೆದಿತ್ತು. 132 ಗಂಟೆ ನಿರಂತರವಾಗಿ ಎನ್‌ಡಿಆರ್‌ಎಫ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದ‌ರು. ದುರಂತದಲ್ಲಿ 57 ಜನರನ್ನು ಜೀವಂತವಾಗಿ ರಕ್ಷಿಸಲಾಗಿತ್ತು. ಯಶಸ್ವಿ ಕಾರ್ಯಾಚರಣೆ ಹಿನ್ನೆಲೆ ಎನ್‌ಡಿಆರ್‌ಎಫ್ ಸಿಬ್ಬಂದಿ ಧಾರವಾಡದ ಹನುಮಂತ ದೇವರಿಗೆ ಭಕ್ತಿ ಸಮರ್ಪಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv