ಎನ್​ಡಿಎ ಸಂಸದೀಯ ಮಂಡಳಿ ಸಭೆ, 39 ಮಿತ್ರ ಪಕ್ಷಗಳ ಹಿರಿಯ ನಾಯಕರೂ ಭಾಗಿ..!

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿರುವ ಎನ್​ಡಿಎ ಮೈತ್ರಿಕೂಟ ಸಂಸದೀಯ ಮಂಡಳಿ ಸಭೆ ನಡೆಸುತ್ತಿದೆ. ಸಂಸತ್​ ಹಾಲ್​​ನಲ್ಲಿ ನಡೆಯುತ್ತಿರುವ ಸಭೆಯಲ್ಲಿ ನೂತನ ಸಂಸದರು ಹಾಗೂ ಇತರೆ ಪ್ರಮುಖ ನಾಯಕರೂ ಕೂಡ ಆಗಮಿಸಿದ್ದಾರೆ.

ವಿಶೇಷ ಅಂದ್ರೆ ಸಂಸದೀಯ ಮಂಡಳಿ ಸಭೆಯಲ್ಲಿ ಸಂಸದರು ಮಾತ್ರ ಹೆಚ್ಚಾಗಿ ಹಾಜರಿರುತ್ತಾರೆ. ಆದರೆ ಈ ಬಾರಿ ಎನ್​ಡಿಎ ಒಕ್ಕೂಟಕ್ಕೆ ಬೆಂಬಲ ಮಾಡಿದ್ದ 39 ಪಕ್ಷಗಳ ಹಿರಿಯ ನಾಯಕರು ಆಗಮಿಸಿದ್ದಾರೆ. ಬಿಜೆಪಿಯ ಹಿರಿಯ ನಾಯಕರಾದ ಎಲ್​.ಕೆ.ಅಡ್ವಾಣಿ, ಮುರುಳಿ ಮನೋಹರ್ ಜೋಶಿ, ಬಿಹಾರ ಸಿಎಂ ನಿತೀಶ್ ಕುಮಾರ್, ತಮಿಳುನಾಡು ಸಿಎಂ ಪಳನಿಸ್ವಾಮಿ, ಶಿವಸೇನೆ ನಾಯಕ ಉದ್ಭವ್ ಠಾಕ್ರೆ ಸೇರಿದಂತೆ ಅನೇಕ ಗಣ್ಯರು ಆಗಮಿಸಿದ್ದಾರೆ.

ಮಹಾರಾಷ್ಟ್ರ ಸಿಎಂ ದೇವೇಂದ್ರ ಪಡ್ನವಿಸ್, ಝಾರ್ಖಂಡ್ ಸಿಎಂ ರಘುಬರ್ ದಾಸ್, ಗೋವಾ ಸಿಎಂ ಪ್ರಮೋದ್ ಸಾವಂತ್, ಅಸ್ಸಾಂ ಸಿಎಂ ಸರ್ಬನಂದ್ ಸೋನವಾಲ್, ಗುಜರಾತ್ ಸಿಎಂ ವಿಜಯ್ ರೂಪಾಣಿ, ಉತ್ತಾರಖಂಡ್​ನ ತ್ರಿವೇಂದ್ರ ಸಿಂಗ್ ರಾವತ್ ಕೂಡ ಭಾಗಿಯಾಗಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv