ಬೆಂಗಳೂರಿನ ಹಲವೆಡೆ ಬಾಂಬ್​ ಸ್ಫೋಟಕ್ಕೆ ಸ್ಕೆಚ್ ​ಹಾಕಿದ್ದ ನಕ್ಸಲ್​ ಅರೆಸ್ಟ್‌

ರಾಮನಗರ: ದೆಹಲಿ ಪೊಲೀಸರ ವಿಶೇಷ ಕಾರ್ಯಾಚರಣೆ ಸ್ಫೋಟಕ ಮಾಹಿತಿ ಹೊರ ಹಾಕಿದೆ. ರಾಮನಗರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಓರ್ವ ನಕ್ಸಲ್‌ನನ್ನ ಬಂಧಿಸಿರೋ ದೆಹಲಿ ಪೊಲೀಸರು, ಆತನಿಂದ ಸ್ಫೋಟಕ ಮಾಹಿತಿಗಳನ್ನ ಪಡೆದಿದ್ದಾರೆ. ಬಂಧಿತ ನಕ್ಸಲ್, ಮನೀರ್ ಅಹ್ಮದ್‌ ಬೆಂಗಳೂರಿನ ಹಲವೆಡೆ ಸ್ಫೋಟ ನಡೆಸಲು ಪ್ಲಾನ್ ರೂಪಿಸಿದ್ದ ಅನ್ನೋ ಮಾಹಿತಿ ಹೊರ ಹಾಕಿದ್ದಾನೆ.

ಜಾರ್ಖಂಡ್ ಮೂಲದ ಮುನೀರ್ ಬಟ್ಟೆ ವ್ಯಾಪಾರಿಯಾಗಿದ್ದು, ರಾಮನಗರದ ಸುತ್ತಮುತ್ತ ವ್ಯಾಪಾರ ಮಾಡುತ್ತಿದ್ದ. ತನ್ನ ಪತ್ನಿಯೊಂದಿಗೆ ರಾಮನಗರದಲ್ಲಿ ವಾಸವಿದ್ದ. ದೆಹಲಿ ಪೊಲೀಸರು ಮುನೀರ್ ಅಹಮದ್​ನನ್ನ ಬಂಧಿಸಿದ ಬಳಿಕ ಆಂತಕಕಾರಿ ಅಂಶಗಳು ಪತ್ತೆಯಾಗಿದ್ದು, ಪೊಲೀಸರನ್ನೇ ಬೆಚ್ಚಿಬೀಳಿಸಿದೆ. ಇನ್ನು ಮುನೀರ್ ಮನೆಯಲ್ಲಿ ಲ್ಯಾಪ್ ಟಾಪ್ ಮತ್ತು ಸ್ಫೋಟಕಗಳಾದ ಜಿಲೆಟಿನ್ ಕಡ್ಡಿಗಳುಮತ್ತು ಕೇಬಲ್ ವೈಯರ್​ಗಳು ಪತ್ತೆಯಾಗಿವೆ.

ಮುನಿರ್​ ಪ್ಲಾನ್​ ಏನು..?
ಬೆಂಗಳೂರಿನ ಪ್ರತಿಷ್ಠಿತ ಪ್ರದೇಶಗಳ ಪಟ್ಟಿ ರೆಡಿ ಮಾಡಿದ್ದ ಮುನೀರ್, ಬೆಂಗಳೂರಿನ ಅನೇಕ ಪ್ರವಾಸಿ ತಾಣಗಳು ಮತ್ತು ದೇವಾಲಯಗಳಾದ ದೊಡ್ಡಗಣಪತಿ, ಇಸ್ಕಾನ್, ಲಾಲ್ ಬಾಗ್ ಕಬ್ಬನ್ ಪಾರ್ಕ್  ಸೇರಿದಂತೆ ಪ್ರವಾಸಿ ತಾಣಗಳಲ್ಲಿ ಸ್ಫೋಟಿಸಲು ನಿರ್ಧರಿಸಿದ್ದ. ಮುನೀರ್‌ ಹಾಕಿದ್ದ ಪ್ಲಾನ್‌ ಲಭ್ಯವಾಗುತ್ತಿದ್ದಂತೆ, ಪೊಲೀಸರು ದೆಹಲಿಗೆ ಕರೆದೊಯ್ದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಈ ಬಗ್ಗೆ ಸದ್ಯ ರಾಜ್ಯ ಪೊಲೀಸರು ನಗರದೆಲ್ಲೆಡೆ ಕಟ್ಟೆಚ್ಚರ ವಹಿಸಲು ಚಿಂತನೆ ನಡೆಸಿದ್ದಾರೆ. ದೆಹಲಿ ಪೊಲೀಸರ ತನಿಖೆ ಬಳಿಕ, ರಾಜ್ಯ ಪೊಲೀಸರು ಮುನೀರ್​ನನ್ನು ವಶಕ್ಕೆ ಪಡೆಯಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಇದೀಗ ನಿನ್ನೆ ಮುನಿರ್​ನನ್ನು ದೆಹಲಿ ಪೊಲೀಸರು ದೆಹಲಿ ಬಂಧಿಸಿ ಕರೆದೊಯ್ದಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv