100 ಕೋಟಿ ಮಾನನಷ್ಟ ಕೇಸ್ ಹಾಕಿದ್ದ ನವಾಜುದ್ದೀನ್ ಸಿದ್ದಿಕಿ ಸೋದರ..!

ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಸೋದರ, ನಿರ್ದೇಶಕ ಶಮ್ಶುದ್ದೀನ್ ಸಿದ್ದಿಕಿ ಪಬ್ಲಿಕೇಷನ್ಸ್ ಒಂದರ ವಿರುದ್ಧ 100 ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಶಮ್ಶುದ್ದೀನಿ, ಬೋಲೆ ಚೂಡಿಯಾ ಅನ್ನೋ ಸಿನಿಮಾದ ಮೂಲಕ ನಿರ್ದೇಶಕನಾಗಿ ಬಾಲಿವುಡ್​ಗೆ ಎಂಟ್ರಿ ಕೊಡ್ತಿದ್ದಾರೆ. ಇದರಲ್ಲಿ ನವಾಜುದ್ದೀನ್ ಸಿದ್ದಿಕಿ ಹಾಗೂ ಮೌನಿ ರಾಯ್ ಲೀಡ್ ರೋಲ್​ನಲ್ಲಿ ನಟಿಸುತ್ತಿದ್ದಾರೆ.

ಆದ್ರೆ, ನಟಿಯರ ಜೊತೆ ಶಮ್ಶುದ್ದೀನ್ ಅನುಚಿತವಾಗಿ ವರ್ತಿಸುತ್ತಾರೆ ಅಂತ ವರದಿಯೊಂದು ಪ್ರಕಟವಾಗಿತ್ತು. ಜೊತೆಗೆ ಅವರಿಗೆ ಌಟಿಟ್ಯೂಡ್ ಪ್ರಾಬ್ಲಮ್ ಕೂಡ ಇದೆ. ಅವರೊಂದಿಗೆ ಕೆಲಸ ಮಾಡೋದು ಕಷ್ಟ ಅಂತಲೂ ಪ್ರಕಟಿಸಲಾಗಿತ್ತು. ಆದ್ರೆ ಇದು ಸತ್ಯಕ್ಕೆ ದೂರ ಅಂತ ಹೇಳಿರುವ ಶಮ್ಶುದ್ದೀನ್, ವರದಿ ಪ್ರಕಟಿಸಿದ ಪಬ್ಲಿಕೇಷನ್ಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ಬಗ್ಗೆ ನವಾಜುದ್ದೀನ್ ಸಿದ್ದಿಕಿ ಯಾವುದೇ ಪ್ರತಿಕ್ರಿಯೆಯನ್ನ ನೀಡಿಲ್ಲ.

ರಾಜೇಶ್ ಹಾಕೂ ಕಿರಣ್ ಭಾಟಿಯಾ ನಿರ್ಮಿಸುತ್ತಿರುವ ಬೋಲೆ ಚೂಡಿಯಾ, ಒಂದೇ ಶೆಡ್ಯೂಲ್​ನಲ್ಲಿ ಶೂಟಿಂಗ್ ಕಂಪ್ಲೀಟ್ ಮಾಡಲಿದೆ. ಮೇ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಜೂನ್​ಗೆಲ್ಲಾ ಮುಕ್ತಾಯವಾಗಲಿದೆಯಂತೆ. ಚಿತ್ರವನ್ನ ಅಕ್ಟೋಬರ್​ನಲ್ಲಿ ರಿಲೀಸ್ ಮಾಡೋಕೆ ಪ್ಲ್ಯಾನ್ ಮಾಡಲಾಗಿದೆ.