‘ನನಗೆ ರಾಜಕೀಯಕ್ಕೆ ಬರೋದು ಇಷ್ಟ ಇರಲಿಲ್ಲ’

ಬಾಗಲಕೋಟೆ: ಮೊದಲು ನನಗೆ ರಾಜಕೀಯಕ್ಕೆ ಬರೋದು ಇಷ್ಟ ಇರಲಿಲ್ಲ, ನನ್ನ ತಾಲೂಕಿನ ಅಭಿವೃದ್ಧಿ ಕುಂಠಿತವಾಗ್ತಿರೋದನ್ನು ನೋಡಿ ನಾನೂ ಪಕ್ಷೇತರ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡಿದ್ದೆ ಅಂತಾ ನವಲಿ ಹಿರೇಮಠ್ ಹೇಳಿಕೆ ನೀಡಿದ್ದಾರೆ. ಜೆಡಿಎಸ್ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಜೆಡಿಎಸ್​ ಜಿಲ್ಲಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಹಿರೇಮಠ್, ನಾನು ಶಾಸಕನಾದ್ರೆ ಫೌಂಡೇಶನ್ ಮೂಲಕ ಇನ್ನಷ್ಟು ಕೆಲಸ ಮಾಡಬಹುದು ಎನ್ನಿಸಿತು. ಅಲ್ಲದೆ ಪಕ್ಷೇತರಕ್ಕಿಂತ ಒಂದು ಪಕ್ಷದವನಾದ್ರೆ ಒಳ್ಳೆಯದ್ದು ಅನ್ನಿಸಿತು. ಇನ್ನು ನನ್ನ & ಕುಮಾರಸ್ವಾಮಿಯವರ ಸ್ವಭಾವ ಒಂದೇ ಅನಿಸ್ತು ಆದ್ದರಿಂದ ಜೆಡಿಎಸ್​ ಸೇರಿದೆ ಎಂದರು. ಇನ್ನು ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡುವ ಹೊಣೆಯನ್ನ ನನಗೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ಪ್ರತಿ ತಿಂಗಳು ಎಲ್ಲಾ ಕ್ಷೇತ್ರಗಳಿಗೂ ಭೇಟಿ ನೀಡಿ ಪಕ್ಷ ಸಂಘಟನೆ ಮಾಡುತ್ತೇನೆ. ಇವರೆಗೂ ನನ್ನ ಫೌಂಡೇಶನ್ ತಾಲ್ಲೂಕಿಗೆ ಮಾತ್ರ ಮೀಸಲಾಗಿತ್ತು. ಅದ್ರೆ ಇನ್ನು ಮುಂದೆ ಇನ್ಮುಂದೆ ಜಿಲ್ಲೆಯ ಎಲ್ಲಾ ತಾಲ್ಲೂಕಿಗೆ ಫೌಂಡೇಶನ್ ಕಾರ್ಯವ್ಯಾಪ್ತಿ ವಿಸ್ತರಿಸುತ್ತೇನೆ. ಆ ಮೂಲಕ ಜನತೆಯ ಸೇವೆ ಮಾಡುತ್ತೇನೆ ಎಂದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv