ಹೈಪೋ ಥೈರಾಯ್ಡಿ​ಸಮ್ ​ಗೆ ಇಲ್ಲಿದೆ ನೈಸರ್ಗಿಕ ಪರಿಹಾರ

ಥೈರಾಯ್ಡ್ ಗ್ರಂಥಿ ನಿಮ್ಮ ಕುತ್ತಿಗೆಯ ಕೆಳ ಭಾಗದಲ್ಲಿರುತ್ತದೆ. ಹೃದಯ, ಮಿದುಳು, ಸ್ನಾಯುಗಳು ಮತ್ತು ಚರ್ಮದಂತಹ ಮಾನವ ದೇಹದ ಪ್ರತಿಯೊಂದು ಭಾಗದ ಮೇಲೂ ಥೈರಾಯ್ಡ್ ಗ್ರಂಥಿ ಬಿಡುಗಡೆ ಮಾಡುವ ಹಾರ್ಮೋನುಗಳು ಪರಿಣಾಮ ಬೀರುತ್ತವೆ. ಥೈರಾಯ್ಡ್ ದೇಹದ ಉಷ್ಣತೆ ಹಾಗೂ ಹೃದಯಬಡಿತವನ್ನು ನಿಯಂತ್ರಿಸುತ್ತದೆ.  ಕ್ಯಾಲೋರಿಸ್​ ಕೂಡಾ ಬರ್ನ್ ಮಾಡುತ್ತದೆ. ದೇಹವು ಸಾಕಷ್ಟು ಥೈರಾಯ್ಡ್ ಹಾರ್ಮೋನುಗಳನ್ನು ಉತ್ಪಾದಿಸಲು ಸಾಧ್ಯವಾಗದಿದ್ದಾಗ, ಮೆಟಬಾಲಿಸಮ್ ನಿಧಾನಗೊಳ್ಳುತ್ತದೆ. ಆಗ ನಮ್ಮ ದೇಹವು ಕಡಿಮೆ ಶಕ್ತಿಯನ್ನು ಉತ್ಪಾದಿಸುವುದರಿಂದ ದೇಹದ ತೂಕ ಹೆಚ್ಚಳವಾಗುತ್ತದೆ. ಹೈಪೋ ಥೈರಾಯ್ಡಿ​ಸಮ್ ಸಮಸ್ಯೆಯಿಂದ ಪಾರಾಗಲು ಹೀಗೆ ಮಾಡಿ

1. ಸಮತೋಲಿತ ಆಹಾರ
ಹೈಪೋ ಥೈರಾಯ್ಡಿ​ಸಮ್​​​ನಿಂದ ಬಳಲುತ್ತಿರುವವರು ಯಾವುದೇ ನಿರ್ದಿಷ್ಟ ಆಹಾರ ಪದ್ಧತಿ ಅನುಸರಿಸಬೇಕು ಅನ್ನೋ ನಿಯಮವಿಲ್ಲ. ಆದರೂ ನಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳು ಮತ್ತು ಜೀವಸತ್ವಗಳನ್ನ ಹೊಂದಿರುವ ಸಂಪೂರ್ಣ ಸಮತೋಲಿತ ಆಹಾರವನ್ನು ಸೇವಿಸುವುದು ಅವಶ್ಯಕ. ಸಿಕ್ಕಸಿಕ್ಕ ಆಹಾರವನ್ನು ತಿನ್ನುವುದು ಥೈರಾಯ್ಡ್ ರೋಗಿಗಳಿಗೆ ಅಪಾಯಕಾರಿ ಅನ್ನೊದಂತೂ ಸುಳ್ಳಲ್ಲ. ಆದ್ದರಿಂದ, ಪೋಷಕಾಂಶಗಳು ಹೆಚ್ಚಾಗಿರುವ ಹಣ್ಣುಗಳು ಮತ್ತು ತರಕಾರಿಗಳನ್ನ ಸೇವಿಸುವುದು ಒಳಿತು

2. ಸೋಯಾ ಮತ್ತು ಕಾಫಿ ಸೇವನೆಯಿಂದ ದೂರವಿರಿ
ಹೈಪೋ ಥೈರಾಯ್ಡಿ​ಸಮ್​​​ನಿಂದ ಬಳಲುತ್ತಿರುವವರು ಸೋಯಾ ಮತ್ತು ಕಾಫಿ ಸೇವನೆ ಕಡಿಮೆ ಮಾಡಬೇಕು. ಯಾಕಂದ್ರೆ ಇದು ಹಾರ್ಮೋನ್​ಗಳು ಔಷಧಿಗಳನ್ನು ಬಳಸುವ ದೇಹದ ಸಾಮರ್ಥ್ಯವನ್ನು ಕಡಿಮೆಗೊಳಿಸುತ್ತದೆ. ಅಲ್ಲದೆ, ಕೇಲ್, ಬ್ರೊಕೊಲಿ ಮತ್ತು ಪಾಲಾಕ್​​​ ಸೊಪ್ಪಿನಂತಹ ಆಹಾರಗಳನ್ನು ಮಧ್ಯಮ ಪ್ರಮಾಣದಲ್ಲಿ ಸೇವಿಸಬೇಕು, ಏಕೆಂದರೆ ಅವುಗಳಲ್ಲಿ ಅಯೋಡಿನ್​ ಹೆಚ್ಚಾಗಿರುತ್ತದೆ.

3. ಆರೋಗ್ಯಕರ ಕೊಬ್ಬಿನಾಂಶವಿರುವ ಆಹಾರ ಸೇವಿಸಿ
ದೇಹಕ್ಕೆ ಅಗತ್ಯವಿರುವ ಹೆಲ್ದಿ ಕೊಬ್ಬಿನಾಂಶ ಮತ್ತು ಕೊಲೆಸ್ಟ್ರಾಲ್​ಗಳ ಕೊರತೆಯಿಂದ, ನಮ್ಮ ದೇಹದಲ್ಲಿನ ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗುತ್ತದೆ. ಹೆಲ್ದಿ ಕೊಬ್ಬು ಮತ್ತು ಕೊಲೆಸ್ಟ್ರಾಲ್​ಗಳನ್ನ ಹೆಚ್ಚಾಗಿ ಹೊಂದಿರುವ ಆಹಾರವನ್ನ ಹಾರ್ಮೋನುಗಳ ಬಿಲ್ಡಿಂಗ್ ಬ್ಲಾಕ್ಸ್ ಎಂದು ಕರೆಯಲಾಗುತ್ತದೆ. ಇವುಗಳನ್ನ ಸೇವಿಸುವುದರಿಂದ ತಕ್ಕ ಮಟ್ಟಿಗೆ ಹೈಪೋ ಥೈರಾಯ್ಡಿ​ಸಮ್ ಕಂಟ್ರೋಲ್​ ಮಾಡಬಹುದು . ಉದಾಹರಣೆಗೆ ಆವಕಾಡೊ, ಆಲಿವ್ ಎಣ್ಣೆ, ತೆಂಗಿನ ಎಣ್ಣೆ, ತುಪ್ಪ, ಅಗಸೆ ಬೀಜ, ಮೀನು, ಮೊಸರು, ಚೀಸ್ ಡ್ರೈ ಫ್ರೂಟ್ಸ್ ಮತ್ತು​ ಹಾಲು.

4. ಆ್ಯಕ್ಯುಪಂಕ್ಚರ್
ನಮ್ಮ ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸಲು ಮತ್ತು  ಹೈಪೋ ಥೈರಾಯ್ಡಿ​ಸಮ್ ಅನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಅಕ್ಯುಪಂಕ್ಚರ್ ಒಂದು ಪರಿಣಾಮಕಾರಿ ಮಾರ್ಗವಾಗಿದೆ. ಇದು ರೋಗ ಲಕ್ಷಣಗಳನ್ನು ಸುಧಾರಿಸುತ್ತದೆ.

5. ಯೋಗ
ಯೋಗದಿಂದ ಆಗುವ ಹಲವಾರು ಆರೋಗ್ಯ ಪ್ರಯೋಜನಗಳ ಬಗ್ಗೆ ನಾವೆಲ್ಲರೂ ತಿಳಿದಿರುತ್ತೇವೆ. ಹಾಗೇ ಯೋಗಾಸನ ಮಾಡುವುದರಿಂದ ರಕ್ತದ ಹರಿವು ಸರಾಗವಾಗುತ್ತದೆ.  ಹೈಪೋ ಥೈರಾಯ್ಡಿ​ಸಮ್​ನಿಂದ ಬಳಲುತ್ತಿರುವವರು ಯೋಗಾಸನ ಮಾಡುವ ಅಭ್ಯಾಸ ರೂಢಿಸಿಕೊಳ್ಳುವುದು ಒಳ್ಳೆಯದು.

6 . ಗ್ಲೂಟನ್ ಫ್ರೀ ಆಹಾರ ಸೇವಿಸಿ
ಹೈಪೋ ಥೈರಾಯ್ಡ್​​  ರೋಗಿಗಳು ಗ್ಲೂಟನ್​ಭರಿತ ಆಹಾರಗಳನ್ನು ಸೇವಿಸಬಾರದು. ಯಾಕಂದ್ರೆ ಇದು ರೋಗ ನಿರೋಧಕ ಶಕ್ತಿಯನ್ನ ಕುಗ್ಗಿಸುತ್ತದೆ. ಬ್ರೆಡ್, ಪಾಸ್ಟಾ, ಮಸಾಲೆ ಪದಾರ್ಥ ಮತ್ತು ಮಸಾಲೆ ಮಿಶ್ರಣಗಳು, ಗೋಧಿ ಮತ್ತು ಬಾರ್ಲಿ ಇದಕ್ಕೆ ಕೆಲವು ಉದಾಹರಣೆ.