ನೈಸರ್ಗಿಕ ಮೌತ್‌ ವಾಷ್‌ ಬಳಸಿ, ಘಮ್ ಅನ್ನೋ ಶ್ವಾಸ ಪಡೀರಿ..!

ಮುಖದಲ್ಲಿನ ಅಂದ ಹೆಚ್ಚಿಸೋದು ನಗು. ಇಷ್ಟಗಲ ನಕ್ಕಾಗ ಹಲ್ಲುಗಳಷ್ಟೇ ಶುಭ್ರವಾಗಿ ಕಂಡ್ರೆ ಸಾಲದು. ಬಾಯಿಂದ ಘಮ್ ಅನ್ನೋ ಪರಿಮಳವೂ ಬರಬೇಕಲ್ವೇ..? ಹಾಗಂತ ಎಷ್ಟು ಅಂತಾ ಕೆಮಿಕಲ್ ಮಿಶ್ರಿತ ಮೌತ್ ವಾಶ್ ಸಾಧನಗಳನ್ನ ಬಳಸೋಕಾಗುತ್ತೆ ಹೇಳಿ? ಇದರಲ್ಲಿರುವ ಆಲ್ಕೊಹಾಲ್, ಸಕ್ಕರೆ ಅಂಶ ಮತ್ತು ಪೊಲೊಕ್ಸಾಮರ್ 407 ಬಾಯಿ ಮತ್ತು ಗಂಟಲಿನ ಕ್ಯಾನ್ಸರನ್ನೂ ತಂದೊಡ್ಡಬಹುದು. ಹೀಗಾಗಿ ನೈಸರ್ಗಿಕವಾಗಿ ಸಿಗೋ ಕೆಲ ವಸ್ತುಗಳಿಂದಲೇ ನ್ಯಾಚುರಲ್ ಮೌತ್‌ ವಾಷ್‌ಗಳನ್ನ ಹೀಗೆ ತಯಾರಿಸಿ..


1.ಅಡುಗೆ ಸೋಡಾ
ಅರ್ಧಲೋಟ ಬಿಸಿ ನೀರಿಗೆ ಅರ್ಧ ಟೀ ಸ್ಪೂನ್ ಬೇಕಿಂಗ್‌ ಸೋಡ ಹಾಕಿ ಕಲಕಿ. ಬಾಯಿಗೆ ಈ ಮಿಶ್ರಣ ಹಾಕಿ 30 ಸೆಕೆಂಡ್‌ಗಳ ಕಾಲ ಮುಕ್ಕಳಿಸಿ ಚೆಲ್ಲಿ. ಬೇಕಿಂಗ್ ಸೋಡಾದಲ್ಲಿ ಓರಲ್ ಬ್ಯಾಕ್ಟೀರಿಯಾ ಕೊಲ್ಲೋ ಶಕ್ತಿಯಿದ್ದು ಬಾಯಿಂದ ಬರೋ ದುರ್ಗಂಧ ಹೊಡೆದೋಡಿಸುತ್ತದೆ.

2.ಉಪ್ಪು ಉಪ್ಪಿನ ನೀರಲ್ಲಿ ಬಾಯಿ ತೊಳೆಯೋದು ಸಾಮಾನ್ಯವಾಗಿ ಎಲ್ರಿಗೂ ಗೊತ್ತಿರೋ ವಿಷಯವೇ. ಆದ್ರೆ ಬೆಚ್ಚಗಿನ ನೀರಿಗೆ ಉಪ್ಪು ಬೆರೆಸಿ ಬಾಯಿ ತೊಳೆದ್ರೆ ಉತ್ತಮ ಫಲಿತಾಂಶ ಇರುತ್ತದೆ. ಕೇವಲ ಬಾಯಿ ದುರ್ಗಂಧಕ್ಕಷ್ಟೇ ಅಲ್ಲ ಹಲ್ಲು, ಒಸಡುಗಳ ಆರೋಗ್ಯಕ್ಕೂ ಇದು ರಾಮಬಾಣ.


3. ಲೋಳೆಸರ ಅರ್ಧ ಕಪ್ ಲೋಳೆಸರದ ರಸಕ್ಕೆ ಅರ್ಧ ಕಪ್ ತಣ್ಣೀರನ್ನ ಹಾಕಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನ ಬಾಯಿಗೆ ಹಾಕಿ ಅರ್ಧ ನಿಮಿಷ ಚೆನ್ನಾಗಿ ಮುಕ್ಕುಳಿಸಿ ಉಗಿಯಿರಿ. ಇದು ಬಾಯ ದುರ್ಗಂಧ ಕಡಿಮೆ ಮಾಡೋ ಜೊತೆಗೆ ಒಸಡುಗಲ್ಲಿ ರಕ್ತ ಸ್ರಾವವಾಗುತ್ತಿದ್ರೆ ಕ್ರಮೇಣವಾಗಿ ಇದನ್ನ ಕಡಿಮೆಗೊಳಿಸುತ್ತೆ.


4.ಲವಂಗ ಎಣ್ಣೆ -1 ಕಪ್ ತಣ್ಣೀರಿಗೆ 10 ಹನಿಗಳು ಲವಂಗದ ಎಣ್ಣೆ ಹಾಕಿ ಬಾಯಿ ಮುಕ್ಕುಳಿಸೋದ್ರಿಂದಲೂ ಬಾಯ ದುರ್ಗಂಧ ಹೋಗಿ ಪರಿಮಳಯುಕ್ತ ಉಸಿರು ನಿಮ್ಮದಾಗುತ್ತೆ.

5. ಬೇವಿನ ಎಣ್ಣೆ- ಬೇವಿನ ಎಣ್ಣೆಯನ್ನು ಬಾಯಿ ಮತ್ತು ಒಸಡಿಗೆ ಲೇಪಿಸಿಕೊಂಡು ಬೆಚ್ಚಗಿನ ನೀರಿನಲ್ಲಿ ಬಾಯಿ ಮುಕ್ಕಳಿಸಬೇಕು. ಇದರಿಂದ ಒಸಡಿನ ನೋವು ದೂರಾಗುವುದಲ್ಲದೇ ಹಲ್ಲುಗಳು ಗಟ್ಟಿಗೊಳ್ಳುತ್ತವೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv