ಅಸ್ತಮಾ ಬಗ್ಗೆ ಆತಂಕ ಬೇಡ.. ಸೂಕ್ತ ಪರಿಹಾರವೇನು?

ವಿಶ್ವದಾದ್ಯಂತ ಅಸ್ತಮಾ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಶ್ವಾಸಕೋಶದ ಸಮಸ್ಯೆಗಳಲ್ಲಿ ಅಸ್ತಮಾ ಕೂಡಾ ಒಂದು. ಉಸಿರಾಟಕ್ಕೆ ಸಂಬಂಧಪಟ್ಟ ಕಾಯಿಲೆ ಇದು. ಅಲರ್ಜಿ, ಮೂಗಿನಿಂದ ನೀರು ಸೋರುವುದು, ಸೀನು, ಕಿವಿ, ಕಣ್ಣು, ಗಂಟಲಿನಲ್ಲಿ ತುರಿಕೆ , ತಲೆನೋವು ಸಮಸ್ಯೆ ಕಾಡಬಹುದು. ಅಲರ್ಜಿ ಕೂಡಾ ಅಸ್ತಮಾಕ್ಕೆ ಕಾರಣವಾಗಬಹುದು. ಆದ್ರೆ ಅಸ್ತಮಾ ಗುಣಪಡಿಸದೇ ಇದ್ದರೆ, ದೀರ್ಘಕಾಲದ ವರೆಗೆ ಕಾಡುವ ಸಾಧ್ಯತೆ ಇದೆ. ವಿಶೇಷವಾಗಿ ಮಹಿಳೆಯರಿಗಿಂತ ಪುರುಷರಲ್ಲೇ ಈ ಕಾಯಿಲೆ ಉಲ್ಬಣಿಸಬಹುದು. ಅಸ್ತಮಾಗೆ ಚಿಕಿತ್ಸೆ ಲಭ್ಯವಿದ್ದು, ಸೂಕ್ತ ವೈದ್ಯರನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬಹುದು. ಅಸ್ತಮಾ ಗುಣಲಕ್ಷಣಗಳು ಯಾವವು? ಅದಕ್ಕೆ ಪರಿಹಾರ ವೇನು? ಚಿಕಿತ್ಸೆ ಹೇಗೆ? ಇದರ ಬಗ್ಗೆ ಡಿಟೇಲ್ಸ್ ಇಲ್ಲಿದೆ.

ಅಸ್ತಮಾದ ಪ್ರಕಾರ
ರೋಗಲಕ್ಷಣಗಳನ್ನು ಅವಲಂಬಿಸಿ ಅಸ್ತಮಾವನ್ನು 2 ವಿಧಗಳಲ್ಲಿ ಕಾಣಬಹುದು. ಆಂತರಿಕ ಹಾಗೂ ಬಾಹ್ಯ ಅಸ್ತಮಾ. ಆಂತರಿಕ ಅಸ್ತಮಾ, ಕೆಲವು ರಾಸಾಯನಿಕ ಅಂಶಗಳು ದೇಹ ಸೇರುವುದರಿಂದ ಉಂಟಾಗುತ್ತವೆ. ಉದಾ: ಸಿಗರೇಟ್ ಹೊಗೆ, ಬಾಹ್ಯ ಅಸ್ತಮಾ: ಬಾಹ್ಯ ಅಸ್ತಮಾ ಹೊರಗಿನ ಅಲರ್ಜಿಯಿಂದ ಉಂಟಾಗುತ್ತದೆ.ಉದಾ: ಧೂಳು.

ಅಸ್ತಾಮಾಗೆ ಕಾರಣಗಳೇನು?
ವಂಶಪಾರಂಪರ್ಯ
ಆಹಾರದ ಅಲರ್ಜಿ
ಮನೆಯಲ್ಲಿರುವ ಧೂಳು, ಧೂಳಿನಲ್ಲಿ ಇರುವಂತಹ ಅಸ್ತಮಾ ಪ್ರಚೋದಕಗಳು
ಸಿಗರೇಟ್ ಹೊಗೆ
ಹವಾಮಾನ ಬದಲಾವಣೆ
ಶೀತ, ಜ್ವರ.
ಸುವಾಸಿತ ವಸ್ತುಗಳು
ಫಾಸ್ಟ್ ಫುಡ್
ಸಾಕು ಪ್ರಾಣಿಗಳು
ಸೋಂಕು

ರೋಗದ ಲಕ್ಷಣಗಳೇನು?
ರಾತ್ರಿ ವೇಳೆ ಹೆಚ್ಚಾಗುವ ಕೆಮ್ಮು
ಉಸಿರಾಡಲು ತೊಂದರೆ,
ಎದೆ ಬಿಗಿಯಾಗುವುದು, ಎದೆಯುರಿತ ಹೆಚ್ಚಾಗುವುದು
ನಿದ್ರೆ ಬಾರದೇ ಇರುವುದು
ಉಬ್ಬಸ, ಉಸಿರು ಕಟ್ಟುವ ಅನುಭವ

ಗುಣಪಡಿಸುವುದು ಹೇಗೆ?
ಬದಲಾಗುತ್ತಿರುವ ಹವಾಮಾನದಿಂದ ಅಸ್ತಮಾ ಹೆಚ್ಚಾಗುವ ಸಾಧ್ಯತೆ ಇರುತ್ತವೆ. ಚಳಿಗಾಲದಲ್ಲಿ ಶೀತವನ್ನುಂಟು ಮಾಡುವ ವೈರಸ್ ಹಾಗೂ ಬ್ಯಾಕ್ಟಿರಿಯಾಗಳು ಅಧಿಕವಾಗಿರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ. ಆದ್ರೆ ಅಸ್ತಮಾ ಇರುವವರು ಆತಂಕ ಪಡಬೇಕಿಲ್ಲ. ಸಂಪೂರ್ಣವಾಗಿ ಅಸ್ತಮಾವನ್ನು ಗುಣಪಡಿಸಲಾಗುತ್ತದೆ. ಸೂಕ್ತ ವೈದ್ಯರನ್ನು ಸಂಪರ್ಕ ಮಾಡಿ, ಔಷಧಿಗಳನ್ನು ಪಡೆದರೆ ಅಸ್ತಮಾ ನಿಯಂತ್ರಿಸಬಹುದು. ಉಸಿರಾಟಕ್ಕೆ ತೊಂದರೆ ಉಂಟು ಮಾಡುವ ಅಂಶಗಳಿಂದ ದೂರ ಇರುವುದು. ಧೂಳು, ಹೊಗೆ ಮುಂತಾದವುಗಳಿಂದ ದೂರ ಇರಬೇಕು. ಫಾಸ್ಟ್ ಫುಡ್, ತಂಪು ಪಾನೀಯ ಅವೈಡ್ ಮಾಡಿ. ಅಸ್ತಮಾ ಔಷಧವನ್ನು ಸದಾ ನಿಮ್ಮ ಹತ್ತಿರ ಇಟ್ಟುಕೊಳ್ಳಿ. ಮನೆಯಲ್ಲಿ ನೀವಿರುವ ಜಾಗವನ್ನು ಶುದ್ಧವಾಗಿಟ್ಟುಕೊಳ್ಳಿ. ವ್ಯಾಯಾಮ, ಪ್ರಾಣಾಯಾಮ ಮಾಡುವುದರಿಂದ ಅಸ್ತಮಾವನ್ನು ಬೇಗ ಗುಣಪಡಿಸಬಹುದು. ಚೆನ್ನಾಗಿ ನಿದ್ರೆ ಮಾಡುವುದು, ಚಟುವಟಿಕೆಯಿಂದ ಇರುವುದು, ಶ್ವಾಸಕೋಶಕ್ಕೆ ಅಗತ್ಯವಾದ ವ್ಯಾಯಾಮ ಮಾಡುವುದರಿಂದ ಈ ಕಾಯಿಲೆಯನ್ನು ನಿರ್ವಹಿಸಲು ಸಾಧ್ಯ. ಉಸಿರಾಟ, ಉಬ್ಬಸ ತೊಂದರೆ ಹೆಚ್ಚಾದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv