ಸಂಸತ್‌ ಚುನಾವಣೆಗೆ ಪ್ರಧಾನಿ ಱಲಿಗಳ ಲಿಸ್ಟ್‌ ರಿವೀಲ್‌

ನವದೆಹಲಿ: 2019ರ ಲೋಕಸಭಾ ಚುನಾವಣೆಗೆ ಬಿಜೆಪಿ ನಾಯಕರು ಭರ್ಜರಿ ತಯಾರಿ ನಡೆಸಿದ್ದು, ಈಗಾಗ್ಲೇ ಹಲವು ರಾಜ್ಯಗಳಿಗೆ ಭೇಟಿ ನೀಡಿ ಅಲ್ಲಿನ ನಾಯಕರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. 2014ರಲ್ಲಿ ಚುನಾವಣೆಯ ಐಕಾನ್‌ ಆಗಿದ್ದ ಪ್ರಧಾನಿ ನರೇಂದ್ರ ಈ ಬಾರಿಯೂ ಇವರೇ ಬಿಜೆಪಿಯ ಟಾಪ್ ಪ್ರಚಾರಕರು. ಎಲ್ಲಾ ವರ್ಗದವರನ್ನು ಸೆಳೆಯ ಬಲ್ಲ ಪ್ರಧಾನಿ ಮೋದಿ ಅವರಿಂದ ಮುಂದಿನ ವರ್ಷದ ಫೆಬ್ರವರಿಯಲ್ಲಿ ದೇಶಾದ್ಯಂತ 50 ಱಲಿಗಳಲ್ಲಿ ಭಾಗವಹಿಸಿ ಜನರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಸುಮಾರು 100 ಸಂಸತ್ ಕ್ಷೇತ್ರಗಳಿಗೆ ಪ್ರಧಾನಿ ಭೇಟಿ ನೀಡಿದ್ದಾರೆ. ಇನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಹಿರಿಯ ನಾಯಕರಾದ ರಾಜ್‌ನಾಥ್‌ ಸಿಂಗ್‌, ನಿತಿನ್‌ ಗಡ್ಕರಿ ಸಹ 50 ಱಲಿಗಳಲ್ಲಿ ಭಾಗವಹಿಸಲಿದ್ದಾರೆ ಅಂತ ಮೂಲಗಳು ತಿಳಿಸಿವೆ. ಪ್ರತಿ ಱಲಿಯಲ್ಲಿ ಎರಡದಿಂದ ಮೂರು ಲೋಕಸಭೆ ಕ್ಷೇತ್ರಗಳನ್ನು ಕವರ್‌ ಮಾಡೋ ಯೋಜನೆ ರೂಪಿಸಿದ್ದಾರೆ. ಚುನಾವಣೆಗೆ ದಿನಾಂಕ ಘೋಷಣೆಗೂ ಮುನ್ನ 200 ಱಲಿಗಳ ಮೂಲಕ 400 ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದೆ ಎನ್ನಲಾಗುತ್ತಿದೆ. ಇದರ ಭಾಗವಾಗಿ ಮೊನ್ನೆಯಷ್ಟೇ ಪ್ರಧಾನಿ ಪಂಜಾಬ್‌ನ ಮಾಲೌಟ್‌ನಲ್ಲಿ ಱಲಿ ನಡೆಸಿದ್ದಾರೆ.