‘ನಂದಿ’ ಬೆಟ್ಟದಲ್ಲಿ ‘ಹಬ್ಬ’ದ ಕಲರವ

ಚಿಕ್ಕಬಳ್ಳಾಪುರ: ಜಿಲ್ಲೆಯ ನಂದಿ ಗ್ರಾಮದಲ್ಲಿ ಕರ್ನಾಟಕ ಸರ್ಕಾರ, ಪ್ರವಾಸೋದ್ಯಮ ಇಲಾಖೆ ವತಿಯಿಂದ ನಂದಿ ಹಬ್ಬ ಆಯೋಜಿಸಲಾಗಿತ್ತು. ನಂದಿಹಬ್ಬ ಆಯೋಜನೆ ಅಂಗವಾಗಿ ನಂದಿ, ಕುಡವತಿ ಗ್ರಾಮಗಳಲ್ಲಿ ವಾಕಥಾನ್, ಸೈಕ್ಲಿಂಗ್, ರನ್ನಿಂಗ್, ಯೋಗ ಆಯೋಜಿಸಲಾಗಿತ್ತು. ನಂದಿ ಬೆಟ್ಟದ ತಪ್ಪಲಿನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ವೀರಪ್ಪ ಮೊಯ್ಲಿ ಚಾಲನೆ ನೀಡಿದರು.  ಬೆಂಗಳೂರು ಸೇರಿದಂತೆ ನಾನಾ ಭಾಗಗಳಿಂದ ಯೋಗ ಮತ್ತು ವಾಕಥಾನ್​ನಲ್ಲಿ ಯೋಗಪಟುಗಳು ಮತ್ತು ವಾಕರ್ಸ್ ಭಾಗಿಯಾಗಿದ್ರು. ದೇಶವಿದೇಶಗಳ ಸೈಕ್ಲಿಸ್ಟ್‌ಗಳು ಸೈಕ್ಲಿಂಗ್‌ನಲ್ಲಿ ಪಾಲ್ಗೊಂಡಿದ್ರು. ಪ್ರವಾಸೋದ್ಯಮಕ್ಕೆಉತ್ತೇಜನ ನೀಡುವ ಉದ್ದೇಶದಿಂದ ನಂದಿ ಹಬ್ಬವನ್ನ ಪ್ರವಾಸೋದ್ಯಮ ಇಲಾಖೆ ಇದೇ ಮೊದಲ ಬಾರಿಗೆ ಆಯೋಜಿಸಿದ್ದು ಮುಂದಿನ ವರ್ಷದಿಂದ 2 ದಿನ ಹಬ್ಬ ಮಾಡುವ ಯೋಚನೆ ಮಾಡಲಾಗಿದೆ.

 

Leave a Reply

Your email address will not be published. Required fields are marked *