ಶೇಕ್​ ಹ್ಯಾಂಡ್​ ಮಾಡಲು ಬಂದ ಪಾಕ್​​ ಅಧಿಕಾರಿಗಳಿಗೆ ICJನಲ್ಲಿ ಮುಖಭಂಗ

ಹೇಗ್​​ (ನೆದರ್​ಲ್ಯಾಂಡ್ಸ್​​): ಭಾರತದ ಕುಲಭೂಷಣ್​​ ಜಾಧವ್​​ಗೆ ಪಾಕಿಸ್ತಾನ ಗಲ್ಲು ಶಿಕ್ಷೆ ವಿಧಿಸಿರುವುದರ ವಿರುದ್ಧ ಭಾರತ ಇಂಟರ್​​ನ್ಯಾಷನಲ್​​ ಕೋರ್ಟ್​ ಆಫ್​​ ಜಸ್ಟೀಸ್​ (ICJ) ಕೋರ್ಟ್​​ನಲ್ಲಿ ದಾವೆ ಹೂಡಿದ್ದು, ಪ್ರಕರಣದ ವಿಚಾರಣೆ ಅಂತಿಮ ಹಂತದಲ್ಲಿದೆ. ಭಾರತದ ಪರ ಹಿರಿಯ ವಕೀಲರಾದ ಹರೀಶ್​ ಸಾಳ್ವೆ ವಾದ ಮಂಡಿಸಿದ್ದಾರೆ.
ಈ ಮಧ್ಯೆ, ಕೋರ್ಟ್​​​ನಲ್ಲಿ ನಡೆಯುತ್ತಿರುವ ವಾದ-ಪ್ರತಿವಾದಗಳನ್ನು ಇಡೀ ಜಗತ್ತೇ ಗಮನಿಸುತ್ತಿದೆ. ಆದ್ರೆ ಕೋರ್ಟ್​ ಕಲಾಪ ಆರಂಭವಾಗುವುದಕ್ಕೂ ಮುನ್ನವೇ ಪಾಕಿಸ್ತಾನಕ್ಕೆ ಭಾರತ ನೈಸ್​​ ಆಗಿಯೇ ಬಿಸಿಮುಟ್ಟಿಸಿದೆ.

ಅಷ್ಟಕ್ಕೂ ಆಗಿದ್ದು ಏನಂದ್ರೆ ಭಾರತದ ನಿಯೋಗದಲ್ಲಿರುವ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ದೀಪಕ್​ ಮಿತ್ತಲ್​ ಕೋರ್ಟ್​​ನಲ್ಲಿ ಹಾಜರಿದ್ದರು. ಆ ವೇಳೆ, ಪಾಕಿಸ್ತಾನದ ಉನ್ನತಾಧಿಕಾರಿ ಅನ್ವರ್​​ ಮನ್ಸೂರ್​ ಖಾನ್, ದೀಪಕ್​ ಮಿತ್ತಲ್ ಅವರತ್ತ ಧಾವಿಸಿ, ಶೇಕ್​ ಹ್ಯಾಂಡ್​​ ಮಾಡಲು ಮುಂದಾದ್ರು. ಮುಂದೆ ತಬ್ಬಿಕೊಂಡು ಬೆನ್ನಿಗೆ ಚೂರಿ ಹಾಕುವ ಪಾಕಿಸ್ತಾನದ ಗುಣದ ಅರಿವಿರುವ ದೀಪಕ್​​, ಶೇಕ್​ ಹ್ಯಾಂಡ್​ ಮಾಡಲಿಲ್ಲ. ಅಷ್ಟೇ ಅಲ್ಲ, ನಿಮ್ಗೆ ದೊಡ್ಡ ನಮಸ್ಕಾರ ಅನ್ನುವ ರೀತಿಯಲ್ಲಿ ದೂರದಿಂದಲೇ ಎರಡೂ ಕೈ ಜೋಡಿಸಿ, ನಮಸ್ಕಾರ ಮಾಡಿದ್ರು. ಪಾಕಿಸ್ತಾನದ ಅಧಿಕಾರಿಗಳು​​ ತಮ್ಮ ಕೈಯನ್ನು ಎಷ್ಟೇ ಮುಂಚಾಚಿದರೂ ಕೂಡ ದೀಪಕ್​ ಸೇರಿದಂತೆ ಭಾರತದ ಯಾವೊಬ್ಬ ಅಧಿಕಾರಿಗಳಿಗೂ ಕೂಡ ಶೇಕ್​ ಹ್ಯಾಂಡ್​ ಮಾಡದೇ ಇರುವುದು ಪಾಕಿಸ್ತಾನಕ್ಕೆ ತೀವ್ರ ಮುಖಭಂಗವನ್ನುಂಟು ಮಾಡಿತು.

ಇದನ್ನೂ ಓದಿ:  ಕುಲಭೂಷಣ್​​ ಜಾಧವ್​​ ಪ್ರಕರಣದ ವಿಚಾರಣೆ ಅಂತಾರಾಷ್ಟ್ರೀಯ ಕೋರ್ಟ್​​​ನಲ್ಲಿ ಆರಂಭ

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv