ವಿದ್ವತ್ ಮೇಲೆ ಹಲ್ಲೆ ಪ್ರಕರಣ: ಜೈಲಿನಲ್ಲಿ ‘ಪ್ರಿನ್ಸ್ ನಲಪಾಡ್’ ದಿನಗಳು ಹೇಗಿದ್ದವು ಗೊತ್ತಾ!?

ಬೆಂಗಳೂರು: ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಲಪಾಡ್ ಗ್ಯಾಂಗ್​ಗೆ ಜಾಮೀನು ಸಿಕ್ಕಿರುವ ಹಿನ್ನೆಲೆ ಇದೀಗ, ನಲಪಾಡ್ ಸಮೇತ ಇಡೀ ಗ್ಯಾಂಗ್ ಜೈಲಿನಿಂದ ಹೊರಬರಲಿದೆ. ಈ ಮಧ್ಯೆ, ಫಸ್ಟ್ ನ್ಯೂಸ್‌ಗೆ ಜೈಲು ಮೂಲಗಳಿಂದ ಎಕ್ಸ್​​ಕ್ಲೂಸಿವ್ ಮಾಹಿತಿ ದೊರೆತಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕೆಲ ಖೈದಿಗಳಿಂದ ಈ ಮಾಹಿತಿ ಸಿಕ್ಕಿದೆ.
ಮೊಹಮದ್ ನಲಪಾಡ್ ಜೈಲಿನಲ್ಲೂ ಪ್ರಿನ್ಸ್ ಥರಾನೇ ಲೈಫ್ ಲೀಡ್ ಮಾಡಿದ್ದ. ನಲಪಾಡ್​ ಪ್ರತಿದಿನ ಜೈಲಿನಲ್ಲಿ ವಿಶೇಷ ಸೌಲಭ್ಯಗಳನ್ನು ಪಡೆದುಕೊಳ್ತಿದ್ದ. ಪ್ರತಿ ಎರಡು ದಿನಗಳಿಗೊಮ್ಮೆ ಶೇವಿಂಗ್ ಮಾಡಿಸಿಕೊಳ್ತಿದ್ದ ಈ ಎ1 ಅರೋಪಿ.
ನಲಪಾಡ್‌ಗೆ ಶೇವ್ ಮಾಡಿದ ಕ್ಷೌರಿಕನಿಗೆ 1 ಸಾವಿರ ಟಿಪ್ಸ್ ಸಿಕ್ತಾ ಇತ್ತು. ಜೈಲಿನಲ್ಲೂ ಹ್ಯಾರಿಸ್ ಪ್ರಿನ್ಸ್, ಆಂಡ್ರಾಯಿಡ್ ಮೊಬೈಲ್ ಪೋನ್ ಬಳಸುತ್ತಿದ್ದನಂತೆ. ನಲಪಾಡ್ ಇದ್ದ ರೂಂನಲ್ಲಿ ಒಂದು ಟಿವಿ ಹಾಗೂ ಫ್ಯಾನ್‌ನ ಸೌಲಭ್ಯವಿತ್ತು. ಪೊಲೀಸ್ರಿಗೆ ತಿಳಿಯದಂತೆ ಮಹಮ್ಮದ್ ಹೆಚ್ಚಾಗಿ ವಾಟ್ಸಪ್ ಕಾಲ್ ಮಾಡ್ತಿದ್ದ . ಜೈಲಿಗೆ ಬಂದ ಮೊದಲೆರಡು ದಿನ ಹುಚ್ಚನಂತೆ ಗಲಾಟೆ ಮಾಡಿದ್ದ. ಒಂದು ವಾರದ ಬಳಿಕ ತಾನಾಗಿ ಸರಿ ಹೋಗಿ ಸಿಬ್ಬಂದಿಗಳ ಜೊತೆ ಆತ್ಮೀಯನಾದ.

ಇತರ ಖೈದಿಗಳಿಗೂ ನಲಪಾಡ್ ಸಹಾಯ ಮಾಡ್ತಿದ್ದ..
ಇನ್ನು ನಲಪಾಡ್ ಜೈಲಿನಲ್ಲಿ ಸಂಕಷ್ಟದಲ್ಲಿರುವ ಖೈದಿಗಳಿಗೆ ನೆರವಾಗಿದ್ದಾನೆ. ಜಾಮೀನು ಪಡೆಯಲು ಹಣವಿಲ್ಲದವರಿಗೆ ನಲಪಾಡ್ ಸಹಾಯ ಮಾಡುತ್ತಿದ್ದ. ಹ್ಯಾರಿಸ್ ಪುತ್ರ ಮೊಹಮದ್ ಹತ್ತಾರು ಮಂದಿಗೆ ಹಣದ ಸಹಾಯ ಮಾಡಿದ್ದಾನೆ. ಜಾಮೀನು ಪಡೆಯಲು ಆಗದವರ ಬಗ್ಗೆ ಅವರ ಲಾಯರ್ ಫೀಜ್‌ನ್ನ ಮತ್ತು ಬಾಂಡ್ ಹಣವನ್ನ ನಲಪಾಡ್ ನೀಡುತ್ತಿದ್ದ ಎನ್ನಲಾಗಿದೆ.

ರೌಡಿಗಳ ಜೊತೆ ಮಾತಾಡುತ್ತಿದ್ದ ನಲಪಾಡ್

ಜೈಲಿನಲ್ಲಿನ ಪ್ರಮುಖ ರೌಡಿಗಳ ಜೊತೆ ನಲಪಾಡ್ ಸಾಕಷ್ಟು ಮಾತುಕತೆ ನಡೆಸಿದ್ದಾನೆ. ಇನ್ನು ನಲಪಾಡ್, ಸೈಲೆಂಟ್ ಸುನೀಲ ಹಾಗೂ ಕವಳನ ಶಿಷ್ಯ ನಾಗನ ಪರಿಚಯ ಮಾಡಿಕೊಂಡಿದ್ದಾನೆ. ಸೈಲೆಂಟ್ ಸುನೀಲ ಹಾಗೂ ರೌಡಿ ನಾಗ ಪ್ರತಿದಿನ ನಲಪಾಡ್‌ಗೆ ಅಗತ್ಯ ವ್ಯವಸ್ಥೆ ಮಾಡುತ್ತಿದ್ದರು. ನಲಪಾಡ್ 115 ದಿನ ಜೈಲಿನಲ್ಲಿ ಕಳೆದ್ರೂ ಒಮ್ಮೆಯೂ ಜೈಲೂಟ ತಿಂದಿಲ್ಲ ಎನ್ನಲಾಗಿದೆ.
ಮೊದಲ ಎರಡು ದಿನ ಜೈಲಿನ ಹಾಪ್ ಕಾಮ್ಸ್ ನಲ್ಲಿ ಪ್ರಿನ್ಸ್ ಮೊಹಮದ್ ಫ್ರೂಟ್ಸ್ ತಿಂದಿದ್ದ. ಆ ಬಳಿಕ ಸೈಲೆಂಟ್ ಸುನೀಲ ಮತ್ತು ನಾಗನ ಪರಿಚಯದಿಂದ ಊಟದ ವ್ಯವಸ್ಥೆ ಮಾಡಲಾಗ್ತಿತ್ತು.
ಇನ್ನು ಹ್ಯಾರಿಸ್ ಪುತ್ರ ನಲಪಾಡ್, ತಾನು ಮಾಡಿದ ಕುಕೃತ್ಯದ ಬಗ್ಗೆ ಸಣ್ಣ ಪಶ್ಚಾತಾಪವನ್ನೂ ಪಟ್ಟಿಲ್ಲ. ಇದಕ್ಕೆಲ್ಲಾ ಯಾರ್ ತಲೆ ಕೆಡುಸ್ಕೊಳ್ತಾರೆ ಅಂತಾ ಇತರ ಖೈದಿಗಳ ಬಳಿ ಹೇಳ್ತಿದ್ದ. ಇವತ್ತಲ್ಲ ನಾಳೆ ನಾನ್ ಹೊರಗೆ ಹೋಗಿಯೇ ಹೋಗ್ತಿನಿ ಬಿಡ್ರಿ ಅಂತಾ ನಲಪಾಡ್ ಅಂತಿದ್ನಂತೆ.

ಜೈಲಿನಲ್ಲಿ ಪಕ್ಕಾ ಕನ್ನಡಿಗನಾಗಿದ್ದ ನಲಪಾಡ್..!

ನಲಪಾಡ್ ಜೈಲಿನಲ್ಲಿ ಪಕ್ಕಾ ಕನ್ನಡಿಗನಾಗಿದ್ದ. ಪ್ರತಿಯೊಬ್ಬರ ಜೊತೆಯಲ್ಲೂ ಕನ್ನಡದಲ್ಲೆ ಮಾತಾಡ್ತಿದ್ದ. ಇಂದು ಜಾಮೀನು ಸಿಕ್ಕಾಗ ಜೈಲಿನ ಇತರ ಖೈದಿಗಳಿಂದ ನಲಪಾಡ್‌ಗೂ ಶುಭಾಶಯ ತಿಳಿಸಿದ್ದಾರೆ. ಜೈಲಿನಿಂದ ಹೊರ ಬಂದ ಬಳಿಕ ತನ್ನ ಭೇಟಿಯಾಗಲು ಕೆಲ ಖೈದಿಗಳಿಗೆ ನಲಪಾಡ್ ಸೂಚನೆ ನೀಡಿದ್ದಾನೆ.

ಸ್ನೇಹಿತನಿಗಾಗಿ ಮತ್ತೊಬ್ಬ ಆರೋಪಿ ಮಾಡಿದ್ದೇನು?
ಹಾಗೆ ನೋಡಿದರೆ ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯಾಗಿದ್ದ ನಲಪಾಡ್​ ಗೆಳೆಯ ಅಭಿಷೇಕ್​ಗೆ ಜಾಮೀನು ಮಂಜೂರು ಆಗಿತ್ತು. ಆದರೆ ಗೆಳೆಯ ನಲಪಾಡ್​ಗಾಗಿ ಆತ, ಜಾಮೀನು ಸಿಕ್ಕರೂ ಶುಲ್ಕ ಕಟ್ಟದೇ ಜೈಲಿನಿಂದ ಹೊರಬಂದಿರಲಿಲ್ಲ. ನಿನ್ನ ಜೊತೆ ಒಳ ಬಂದಿದ್ದೇನೆ.. ನಿನ್ನ ಜೊತೆಯೇ ಹೊರಗೆ ಹೋಗುವುದಾಗಿ ಆತ ಹೇಳಿದ್ದಾನೆ. ನಲಪಾಡ್ ಬಿಟ್ಟು ಒಬ್ಬನೆ ತೆರಳಲ್ಲ ಎಂದು ಅಭಿಷೇಕ್ ಜೈಲಲ್ಲೇ ಉಳಿದಿದ್ದನಂತೆ. ಅಭಿಷೇಕ್ 20 ದಿನಗಳ ಹಿಂದೆಯೇ ಹೈ ಕೋರ್ಟ್ ನಲ್ಲಿ ಜಾಮೀನು ಪಡೆದಿದ್ದ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv