ಜೈಲ್​ ಬರ್ಡ್​ ನಲಪಾಡ್ ಮುಕ್ತ ಮುಕ್ತ ..!

ಬೆಂಗಳೂರು: ನಲಪಾಡ್ ಬೇಲ್ ಕಾಪಿ ಪರಪ್ಪನ ಅಗ್ರಹಾರಕ್ಕೆ ತಲುಪಿದ ತಕ್ಷಣವೇ ಕಾನೂನು ಪ್ರಕ್ರಿಯೆ ಮುಗಿಸಿ ನಲಪಾಡ್ ಪರಪ್ಪನ ಅಗ್ರಹಾರ ಜೈಲಿನಿಂದ ಹೊರ ಬಂದಿದ್ದಾರೆ. ನಲಪಾಡ್ ಜಾಮೀನು ಆದೇಶ ಪ್ರತಿ ಜೈಲು ಅಧಿಕಾರಿಗಳಿಗೆ ನೀಡಿ ಅಮೀನ್ ಕೋರ್ಟ್‌ನಿಂದ ಹೊರನಡೆದಿದ್ದಾರೆ. ಜೈಲಿನಿಂದ ಹೊರಬಂದ ನಲಪಾಡ್ ವೈಟ್ ಆಡಿ ಕಾರಿನಲ್ಲಿ ತಮ್ಮ ನಿವಾಸಕ್ಕೆ ತೆರಳಿದ್ದಾರೆ.

ಇನ್ನು ಮೊಹಮದ್ ಹ್ಯಾರಿಸ್ ಮನೆ ಮುಂದೆ ಹಬ್ಬದ ವಾತಾವರಣ ಮನೆ ಮಾಡಿದೆ. ನಲಪಾಡ್ ಹ್ಯಾರಿಸ್ ಮನೆ ಮುಂದೆ ಅಭಿಮಾನಿಗಳು ಜಮಾಯಿಸುತ್ತಿದ್ರು. ನಲಪಾಡ್ ಆಗಮನಕ್ಕಾಗಿ ಅಭಿಮಾನಿಗಳು ಕಾದು ಕುಳಿತಿದ್ದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv