ಹೆಬ್ಬಾವು ನಾಯಿಯನ್ನ ನುಂಗಲೆತ್ನಿಸೋ ವೈರಲ್ ವಿಡಿಯೋದಲ್ಲಿ ಇದನ್ನು ಗಮನಿಸಿದ್ರಾ?

ದೈತ್ಯ ಹೆಬ್ಬಾವೊಂದು ಜೀವಂತ ನಾಯಿಯನ್ನು ನುಂಗಲೆತ್ನಿಸುವ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದೆ. ಆದ್ರೆ ಈ ವಿಡಿಯೋದಲ್ಲಿ ಹೆಬ್ಬಾವಿನ ಹಿಡಿತದಲ್ಲಿರುವ ನಾಯಿಗೆ ಏನಾಗಿಬಿಡುತ್ತೋ ಅಂತ ಮತ್ತೊಂದು ನಾಯಿ ಬೊಗಳುತ್ತಾ, ಮೂಕವೇದನೆ ಅನುಭವಿಸೊ ದೃಶ್ಯ ಕಂಡು ಜನ ಮನಸೋತಿದ್ದಾರೆ.

ಥೈಲ್ಯಾಂಡ್​​​ನಲ್ಲಿ ಕೆಲವು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಫೇಸ್​​ಬುಕ್​ ಪೇಜ್​ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಹೆಬ್ಬಾವು ನಾಯಿಯನ್ನ ಸುತ್ತುವರಿದು ಬಿಗಿಯಾಗಿ ಹಿಡಿದುಕೊಂಡಿತ್ತು. ಹಾವಿನ ಹಿಡಿತದಿಂದ ಬಿಡಿಸಿಕೊಳ್ಳಲು ನಾಯಿ ಪರದಾಡುವಾಗ ಯುವಕರ ಗುಂಪೊಂದು ಇದನ್ನು ನೋಡಿದೆ. ಬಳಿಕ ಆ ಯುವಕರು ಹಾವಿಗೆ ಕೋಲಿನಿಂದ ಹೊಡೆದು ನಾಯಿಯನ್ನು ಅದರಿಂದ ಬಿಡಿಸಲು ಮುಂದಾಗ್ತಾರೆ. ಒಬ್ಬ ಯುವಕನಂತೂ ಬರಿಗೈಯ್ಯಲ್ಲೇ ಹಾವನ್ನು ಸಿಡಿಲಿಸಿ ನಾಯಿಯನ್ನು ಕಾಪಾಡಲು ಪ್ರಯತ್ನಿಸೋದನ್ನ ಕಾಣಬಹುದು.

ಕೊನೆಗೆ ನಾಯಿಯನ್ನು ರಕ್ಷಣೆ ಮಾಡುವಲ್ಲಿ ಆ ಯುವಕರು ಯಶಸ್ವಿಯಾಗ್ತಾರೆ. ಆದ್ರೆ ಅಷ್ಟೂ ಹೊತ್ತು ಮತ್ತೊಂದು ಬಿಳಿ ನಾಯಿ ಅನುಭವಿಸಿದ ಪರದಾಟ ಗಮನ ಸೆಳೆದಿದೆ. ನಾಯಿಯನ್ನು ಹಾವಿನಿಂದ ರಕ್ಷಣೆ ಮಾಡುವವರೆಗೂ ಬಿಳಿ ನಾಯಿ ಹಾವಿನ ಹಿಂದೆ ಮುಂದೆಯೇ ಓಡಾಡುತ್ತಾ ಪರದಾಡಿದೆ. ಕೊನೇ ಹಂತದಲ್ಲಿ ಹೆಬ್ಬಾವನ್ನು ಕಚ್ಚಲೂ ಮುಂದಾಗೋದನ್ನ ವಿಡಿಯೋದಲ್ಲಿ ಕಾಣಬಹುದು. ಪ್ರಾಣಿಗಳೂ ಸಹ ಪರಸ್ಪರ ಪ್ರೀತಿ, ಸಹಾನುಭೂತಿ ಹೊಂದಿರುತ್ತವೆ ಅನ್ನೋದನ್ನ ಈ ಘಟನೆ ತೋರಿಸಿದೆ.

Posted by Like click on Wednesday, June 20, 2018

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv