ನವರಾತ್ರಿಯಲ್ಲಿ ಈ ಬಾಬಾ ಹೊಟ್ಟೆಯ ಮೇಲೆ 21 ಬಿಂದಿಗೆ ಬ್ಯಾಲೆನ್ಸ್​ ಮಾಡ್ತಾರಂತೆ..!

ಪಾಟ್ನಾ: ಇಲ್ಲಿನ ಸುಪ್ರಸಿದ್ದ ನೌಲಾಖಾ ದೇವಸ್ಥಾನದಲ್ಲಿ ದುರ್ಗಾ ದೇವಿಯ ಎದುರು ಹೊಟ್ಟೆಯ ಮೇಲೆ 21 ಬಿಂದಿಗೆಗಳನ್ನ ಇಟ್ಟುಕೊಂಡು ನೆಲದ ಮೇಲೆ ಮಲಗಿರುವ ನಾಗೇಶ್ವರ ಬಾಬಾ ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದಾರೆ.

ನಾಗೇಶ್ವರ ಬಾಬಾ 22 ವರ್ಷಗಳಿಂದ ನವರಾತ್ರಿಯ ವೇಳೆ, ದುರ್ಗಾ ದೇವಿಯನ್ನು ಪೂಜಿಸಲು ಹೊಟ್ಟೆಯ ಮೇಲೆ 21 ಬಿಂದಿಗೆಗಳನ್ನ ಇಟ್ಟುಕೊಂಡು ಬ್ಯಾಲೆನ್ಸ್​ ಮಾಡುವ ಮೂಲಕ ದೇವಿಯನ್ನ ಆರಾಧಿಸುತ್ತಾರಂತೆ. ನವರಾತ್ರಿ ಉತ್ಸವದ ಸಂದರ್ಭದಲ್ಲಿ ಬಾಬಾ, ಹೊಟ್ಟೆಗೆ ನೀರು ಆಹಾರ ಇಲ್ಲದೆ ‘ನಿರ್ಜಲ ಉಪವಾಸ’ ಮಾಡ್ತಾರಂತೆ.

ಬಾಬಾ ಹೇಳುವಂತೆ ಇದನ್ನು ಮಾಡಲು ದುರ್ಗಾ ದೇವಿ ಅವರಿಗೆ ಶಕ್ತಿಯನ್ನು ನೀಡುತ್ತಾಳಂತೆ. ನವರಾತ್ರಿಗೆ 15 ದಿನ ಮುಂಚೆ ಉಪವಾಸ ಪ್ರಾರಂಭಿಸುತ್ತಾರಂತೆ. 22 ವರ್ಷಗಳ ಹಿಂದೆ, ವೈದ್ಯರು ಬಾಬಾಗೆ ಅವರ ಎರಡೂ ಮೂತ್ರಪಿಂಡಗಳೂ ವಿಫಲವಾಗಿವೆ. ಹಾಗಾಗಿ, ತೂಕ ಕಡಿಮೆ ಮಾಡಿಕೊಂಡು ತೆಳ್ಳಗಾಗುವಂತೆ ಸೂಚಿಸಿದ್ರಂತೆ. ಇಲ್ಲಾಂದ್ರೆ ಬದುಕುಳಿಯುವುದು ಕಷ್ಟ ಎಂದೂ ಹೇಳಿದ್ದರಂತೆ. ಹಾಗಾಗಿ ದುರ್ಗಾದೇವಿಯನ್ನು ಈ ರೀತಿ ಆರಾಧಿಸುವುದರಿಂದ ತಾನು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಧ್ಯವಾಯಿತು. ಈಗ ಅದೇ ಅಭ್ಯಾಸವನ್ನು ರೂಢಿಸಿಕೊಂಡಿದ್ದೇನೆ ಎಂದು ಬಾಬಾ ಹೇಳ್ತಾರೆ. ಮಾತಾ ದುರ್ಗಾ ದೇವಿಯ ಆಶೀರ್ವಾದವನ್ನು ಪಡೆಯಲು ಭಾರೀ ಜನಸ್ತೋಮವೇ ಇಲ್ಲಿಗೆ ಭೇಟಿ ನೀಡುತ್ತಾರಂತೆ.