ಚಿತ್ರೋತ್ಸವವನ್ನ ಸದ್ಬಳಕೆ ಮಾಡಿಕೊಳ್ಳಿ-ನಾಗತಿಹಳ್ಳಿ ಚಂದ್ರಶೇಖರ್

ಮೈಸೂರು: ದಸರಾ ಸಂಭ್ರಮ, ಸಡಗರದಿಂದ ಆರಂಭವಾಗಿದೆ. ದಸರಾ ಚಿತ್ರೋತ್ಸವವನ್ನ ಸದ್ಬಳಕೆ ಮಾಡಿಕೊಳ್ಳಿ ಅಂತಾ ಚಲನಚಿತ್ರ ಮಂಡಳಿ ಅಧ್ಯಕ್ಷ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ಮೈಸೂರಿನಲ್ಲಿ ದಸರಾ ಚಲನಚಿತ್ರೋತ್ಸವ ಉದ್ಘಾಟನೆ ಬಳಿಕ ಮಾತನಾಡಿದ ಅವರು, ವಿಶ್ವದಾದ್ಯಂತ ಪ್ರಸಿದ್ಧಿ ಪಡೆದ ಹಬ್ಬ ದಸರಾ. ದಸರಾ ಚಿತ್ರೋತ್ಸವವನ್ನ ಸದ್ಭಳಕೆ ಮಾಡಿಕೊಳ್ಳಿ. ಸಾಂಸ್ಕೃತಿಕ ವಿಕೇಂದ್ರೀಕರಣ ಆಗ್ಬೇಕು. ಹೀಗಾಗಿ ಬೆಂಗಳೂರಿನ ಹೊರಗೆ ಚಿತ್ರೋತ್ಸವ ಆಯೋಜನೆ ಮಾಡಲಾಗಿದೆ. ಸದ್ಯದಲ್ಲೇ ಮೈಸೂರಲ್ಲಿ ಪನೋರಮಾ ಚಲನಚಿತ್ರೋತ್ಸವ ಆಯೋಜನೆ ಮಾಡಲಾಗುತ್ತದೆ ಅಂತಾ ತಿಳಿಸಿದರು.

ಇನ್ನು ಮೈಸೂರಿನಲ್ಲಿ ಇಂದು ಸಡಗರದ ದಸರಾ ಸಂಭ್ರಮ ಆರಂಭವಾಗಿದ್ದು, ಪ್ರವಾಸಿಗರ ದಂಡೇ ನಗರದತ್ತ ಆಗಮಿಸಿದೆ. ಇನ್ನೊಂದೆಡೆ ದಸರಾ ಚಲನಚಿತ್ರೋತ್ಸವವೂ ಆರಂಭಗೊಂಡಿದ್ದು, ಹಲವು ಚಿತ್ರಗಳು ಪ್ರದರ್ಶನ ಕಾಣ್ತಿವೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv