ಟ್ರಡಿಷನಲ್ ಡ್ಯಾನ್ಸ್ ಮಾಡಿ ವಿಶ್ವ ದಾಖಲೆ ಬರೆದ 5000 ಮಹಿಳೆಯರು..!

ನಾಗಲ್ಯಾಂಡ್: ಕೊನ್ಯಾಕ್ ಸಮುದಾಯದ 5 ಸಾವಿರ ಮಹಿಳೆಯರು ಒಟ್ಟಿಗೆ ತಮ್ಮ ಸಂಪ್ರದಾಯಿಕ ಕೊನ್ಯಾಲ್ ಡ್ಯಾನ್ಸ್​ ಮಾಡಿ ಹೊಸ ದಾಖಲೆ ಬರೆದಿದ್ದಾರೆ. ಮೋನ್ ಟೌನ್​​ನಲ್ಲಿ ನಡೆದ ಹಾರ್ನ್​​ಬಲ್​ ಫೆಸ್ಟಿವಲ್-2019 ಅಂಗವಾಗಿ ಸಂಪ್ರದಾಯಿಕ ಡ್ಯಾನ್ಸ್​ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.  ಈ ವೇಳೆ ನಾಗ ಟ್ರೈಬಲ್​​ನ ಮಹಿಳೆಯರು ಡ್ಯಾನ್ಸ್​ ಪ್ರದರ್ಶನ ಮಾಡಿದರು. ಇದು ಗಿನ್ನಿಸ್​ ವರ್ಡ್​ ರೆಕಾರ್ಡ್​ ಬುಕ್​ನಲ್ಲಿ ದಾಖಲಾಗಿದೆ.