ಮಧು ಪತ್ತಾರ ಮನೆಗೆ ಸಚಿವ ನಾಡಗೌಡ ಭೇಟಿ, ಸಾಂತ್ವನ

ರಾಯಚೂರು: ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ ಸಾವಿನ ಪ್ರಕರಣಕ್ಕೆ ಸಂಭಂದಪಟ್ಟಂತೆ ಮಧು ಮನೆಗೆ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ  ವೆಂಕಟರಾವ್​ನಾಡಗೌಡ ಭೇಟಿ ನೀಡಿ ಮಧು ಪೋಷಕರಿಗೆ ಸಾಂತ್ವನ ಹೇಳಿದ್ದಾರೆ. ಸಿಐಡಿ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರಿಗೆ ಖಂಡಿತವಾಗಿಯೂ ಕಠಿಣ ಶಿಕ್ಷೆ ಆಗುತ್ತೆ. ಘಟನೆ ನಡೆಯಬಾರದಿತ್ತು ನಡೆದುಹೊಗಿದೆ. ಮುಂದೆ ಯಾವತ್ತೂ ಇಂತಹ ಘಟನೆ ನಡೆಯಬಾರದು. ಮಧು ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮಧು ಪೋಷಕರಿಗೆ ಸಾಂತ್ವನ ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು, ಮಧು ಪ್ರಕರಣವನ್ನು ಸಿಐಡಿ ಅಧಿಕಾರಿಗಳು ತನಿಖೆ ಆರಂಭ ಮಾಡಿದ್ದಾರೆ. ಮಧು ಮನೆಗೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದ್ದೇನೆ. ನಾವು ಸೂಕ್ತವಾದ ತನಿಖೆ ಮಾಡುತ್ತೇವೆ ಸರ್ಕಾರ ಅವರ ಜೊತೆಗಿದೆ. ಈ ಪ್ರಕರಣದ ಕುರಿತು ನಾನು ಸಿಎಂ ಜೊತೆ ಮಾತಾಡಿದ್ದೇನೆ. ಈ ಸಾವಿನಿಂದ ಸಮಾಜ ತಲೆ ತಗ್ಗಿಸುವಂತಾಗಿದೆ. ಈ ಘಟನೆಯಲ್ಲಿ ಯಾರೇ ಇದ್ರು ಕಠಿಣ ಶಿಕ್ಷೆ ಆಗುತ್ತೆ. ಸಾವಿರಾರು ವಿದ್ಯಾರ್ಥಿಗಳು ಮಧುಗೆ ನ್ಯಾಯ ಬೇಕೆಂದು ಪ್ರತಿಭಟನೆ ಮಾಡ್ತಿದ್ದಾರೆ. ಈ ಸಮಯದಲ್ಲಿ ನಾನು ವಿದ್ಯಾರ್ಥಿಗಳಿಗೆ ಮನವಿ ಮಾಡ್ತೇನೆ. ಹೋರಾಟ ಮಾಡಿ ಅದಕ್ಕೆ ತಕ್ಕ ರೀತಿಯಲ್ಲಿ ಸ್ಪಂದಿಸುತ್ತೇವೆ. ಈಗಾಗಲೇ ಸಿಐಡಿಗೆ ವಹಿಸಿದ್ದೇವೆ ಸತ್ಯ ಏನೆಂದು ಹೊರಗಡೆ ತೆಗೆಯುತ್ತೇವೆ. ಸಿಬಿಐ ಗಿಂತ ನಮ್ಮ ಪೋಲಿಸರು ಉತ್ತಮವಾಗಿಯೇ ತನಿಖೆ ಮಾಡ್ತಾರೆ. ವಿದ್ಯಾರ್ಥಿಗಳಲ್ಲಿ ಮನವಿ ಮಾಡ್ತೇನೆ ತನಿಖೆಗೆ ಅನೂಕೂಲ ಮಾಡಿ ಕೊಡಿ. ತನಿಖೆ ಸರಿಯಾಗಿ ಆಗಿಲ್ಲ ಅಂದ್ರೆ ಮುಂದೆ ಸಿಬಿಐ ಗೆ ಕೊಡುವ ಬಗ್ಗೆ ನೋಡೋಣ ಎಂದು ಮೃತ ಮಧು ಮನೆಗೆ ಭೇಟಿ ನೀಡಿ ಸಚಿವ ವೆಂಕಟರಾವ್ ನಾಡಗೌಡ ವಿಶ್ವಾಸ ನೀಡಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv