3 ನಾಗರ ಹಾವುಗಳ ರಕ್ಷಣೆ ಮಾಡಿ‌, ಸೈ ಅನಿಸಿಕೊಂಡ ಮೈಸೂರು ಮಂದಿ

ಮೈಸೂರು: ಸಾಂಸ್ಕೃತಿಕ ನಗರಿ ಮಂದಿ ಮಾನವೀಯತೆ ಮೆರೆದಿದ್ದು, ವಿಷ ಕಕ್ಕುವ ಹಾವುಗಳ ರಕ್ಷಣೆ ಮಾಡಿ‌ ಸೈ ಅನಿಸಿಕೊಂಡಿದ್ದಾರೆ. ಜೆಸಿಬಿಯಲ್ಲಿ ಗುಂಡಿ ತೆಗೆಯುವ ವೇಳೆ 3 ನಾಗರಹಾವುಗಳು ಪ್ರತ್ಯಕ್ಷವಾಗಿದ್ದವು. ಜೆಸಿಬಿ ಕಾರ್ಯಚರಣೆ ನಡೆಸುತ್ತಿರುವಾಗ ಹಾವುಗಳಿಗೆ ಗಾಯಗಳಾಗಿವೆ.

ತಕ್ಷಣ ಉರುಗತಜ್ಞ ಕೆಂಪರಾಜು ಅವುಗಳನ್ನ ಸೆರೆ ಹಿಡಿದು, ರಕ್ಷಿಸಿದ್ದಾರೆ. ಗಾಯಗೊಂಡ ಹಾವುಗಳಿಗೆ ಧನ್ವಂತರಿ ರಸ್ತೆಯಲ್ಲಿರೋ ಪಶುವೈದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ವೈದ್ಯರು 3 ಹಾವುಗಳಿಗೆ ಅನೇಸ್ತೆಶಿಯಾ ನೀಡಿ, ಚಿಕಿತ್ಸೆ ನೀಡಿದರು. ಮೈಸೂರು ಹೊರವಲಯದ ಆರ್. ಬಿ.ಐ ಕ್ವಾಟ್ರಸ್ ನಲ್ಲಿ ಗುಂಡಿ ತೋಡುವ ವೇಳೆ ಈ ಹಾವುಗಳು ಪ್ರತ್ಯಕ್ಷವಾಗಿದ್ದವು.