ನನಗೆ ಕನ್ನಡ ನಾಡಿನಲ್ಲಿ ಮತ್ತೆ ಮತ್ತೆ ಹುಟ್ಟುವಾಸೆ: ಇದು ಕನ್ನಡತಿ ಸುಧಾಮೂರ್ತಿ ಹೆಬ್ಬಯಕೆ

ಮೈಸೂರು: ನನಗೆ ಕನ್ನಡ ನಾಡಿನಲ್ಲಿ ಮತ್ತೆ ಮತ್ತೆ ಹುಟ್ಟುವಾಸೆ ಇದೆ. ಕರ್ನಾಟಕದಲ್ಲಿ ಮರುಜನ್ಮ ಹೊಂದುವ ಹೆಬ್ಬಯಕೆ ನನಗಿದೆ ಎಂದು ಇನ್ಫೋಸಿಸ್​ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಹೇಳಿದರು.
ನಾಡಹಬ್ಬ ಮೈಸೂರು ದಸರಾವನ್ನ ಉದ್ಘಾಟಿಸಿದ ನಂತರ ಮಾತನಾಡಿದ ಅವರು, ನಮ್ಮ ನಾಡಿನ ಸಂಸ್ಕೃತಿಯ ಪ್ರತಿಬಿಂಬ ದಸರಾ ಮಹೋತ್ಸವ ಉದ್ಘಾಟನೆಗೆ ನನ್ನ ಆಯ್ಕೆ ಮಾಡಿದ್ದು, ನನ್ನ ಪೂರ್ವಜನ್ಮದ ಪುಣ್ಯ. ಅವಿರೋಧವಾಗಿ ನಾನು ಆಯ್ಕೆಯಾಗಿದ್ದು ಅತೀವ ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಮೈಸೂರಿನ ದೊರೆಗಳಿಗೆ ನಾವು ಕೃತಜ್ಞರಾಗಿರಬೇಕು. ಮೈಸೂರಿನ ಅರಸರು ಇಲ್ಲದಿದ್ರೆ ನಮ್ಮ ಕರ್ನಾಟಕ ಹರಿದು ಹಂಚಿ ಹೋಗುತ್ತಿತ್ತು. ದಸರಾ ಶತಮಾನಗಳಿಂದ ಆಚರಿಸುತ್ತಿರೋ ಹಬ್ಬ. ಕರ್ನಾಟಕ ಸರ್ಕಾರ ದಸರಾವನ್ನ ಅತ್ಯಂತ ಉತ್ತಮವಾಗಿ ಆಚರಿಸಿಕೊಂಡು ಬರುತ್ತಿದೆ ಎಂದು ಹೇಳಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv