ನವರಾತ್ರಿ ವೈಭವ ಶುರು: ನಾಡಹಬ್ಬಕ್ಕೆ ವಿದ್ಯುಕ್ತ ಚಾಲನೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 7.30 ರ ಸುಮಾರಿಗೆ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾ ಮೂರ್ತಿ 2018ನೇ ಸಾಲಿನ ಮೈಸೂರು ದಸರಾವನ್ನು ಉದ್ಘಾಟಿಸಿದ್ದಾರೆ. ಚಾಮುಂಡಶ್ವೇರಿಯ ಸನ್ನಿದಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ನಾಡದೇವತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾಗೆ ಚಾಲನೆ ನೀಡಲಾಯ್ತು. ಇನ್ನೂ ದಸರಾಗೆ ಚಾಲನೆ ನೀಡಲು ಬಂದ ಸಿಎಂಗೆ ಪೂರ್ಣಕುಂಬ ಸ್ವಾಗತ ನೀಡಲಾಯ್ತು. ಕಲಾ ತಂಡಗಳು ಡೊಳ್ಳು ಕುಣಿತ ವೀರಗಾಸೆ ಕುಣಿತದೊಂದಿಗೆ ಸಿಎಂಗೆ ಅದ್ಧೂರಿ ಸ್ವಾಗತ ಕೋರಿದರು.

ಡಾ.ಸುಧಾ ಮೂರ್ತಿ ಅವರಿಗೆ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಸಚಿವರಾದ ಜಿ ಟಿ ದೇವೇಗೌಡ, ಸಾರಾ ಮಹೇಶ್ , ಜಯಮಾಲ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಲ್ ನಾಗೇಂದ್ರ, ಎಸ್ ಎ ರಾಮದಾಸ್, ಹರ್ಷವರ್ಧನ, ಸೇರಿದಂತೆ ಹಲವು ಮುಖಂಡರು ನಾಡಹಬ್ಬದ ಉದ್ಘಾಟನೆಗೆ ಸಾಕ್ಷಿಯಾದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv