ದಸರಾ ಸಂಭ್ರಮ: ಖಾಸಗಿ ದರ್ಬಾರ್​ಗೆ ಪಟ್ಟದ ಆನೆಗಳು ರೆಡಿ

ಮೈಸೂರು: ನಾಡ ಹಬ್ಬ ಮೈಸೂರು ದಸರಾ ಉದ್ಘಾಟನೆಯಾದ ಬೆನ್ನಲ್ಲೇ ಸಾಂಸ್ಕೃತಿಕ ನಗರಿ ಕಳೆಗಟ್ಟಿದೆ. ಮತ್ತೊಂದೆಡೆ ಅರಮನೆಯಲ್ಲಿ ರಾಜಮನೆತನದ ಖಾಸಗಿ ದರ್ಬಾರ್ ಕೂಡ ಶುರುವಾಗಿದೆ. ಜೊತೆಗೆ ಖಾಸಗಿ ದರ್ಬಾರ್​ಗೆ ಪಟ್ಟದ ಆನೆಗಳು ಸನ್ನದ್ಧವಾಗಿವೆ. ಕಲಾವಿದರು ಆನೆಗಳಿಗೆ ಬಣ್ಣ ಬಳಿದು ಸಿಂಗರಿಸುತ್ತಿದ್ದಾರೆ. ಪಟ್ಟದ ಆನೆ ಗೋಪಿ, ವಿಕ್ರಮ ಪ್ರೀತಿ, ಚಂಚಲ್, ರೂಬಿ, ಸೀತಾ ಆನೆಗಳು ಅರಮನೆಯ ಒಡೆಯರ್ ನಿವಾಸದ ಬಳಿ ಸಿಂಗಾರಗೊಳ್ಳುತ್ತಿವೆ. ಅರಮನೆಯ ಖಾಸಗಿ ಹಾಲ್​ನಲ್ಲಿ ಪೂಜಾ ಕೈಂಕರ್ಯಗಳು ನೆರವೇರಿಸಲಾಗುತ್ತಿದೆ. ಇನ್ನು 12 ಗಂಟೆಯಿಂದ 12:35ರ ಶುಭ ಲಗ್ನದಲ್ಲಿ ಯದುವೀರ್ ಒಡೆಯರ್ ಸಿಂಹಾಸನಾರೋಹಣ ಮಾಡಲಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv