ಬೆಳ್ಳಂದೂರು ಕೆರೆಯನ್ನ ನೆನಪಿಸಿತು ಚೀನಾದ ರಸ್ತೆ..!

ಬೆಳ್ಳಂದೂರು ಕೆರೆಯಲ್ಲಿ ಬಿಳಿ ನೊರೆ ಏಳುತ್ತಿರೋದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಸಂಸ್ಕರಣೆ ಮಾಡದ ತ್ಯಾಜ್ಯವನ್ನು ಕೆರೆಗೆ ಹರಿಬಿಟ್ಟ ಕಾರಣ ಅದರಿಂದ ಬರೋ ನೊರೆಯಿಂದ ವಾಹನ ಸವಾರರು ನಿತ್ಯ ಪರದಾಡುವ ಸ್ಥಿತಿ ಇದೆ. ಇದು ಬೆಂಗಳೂರಲ್ಲಷ್ಟೇ ಅಲ್ಲ, ಕಳೆದ ಮಂಗಳವಾರ ಇದೇ ಸ್ಥಿತಿ ಚೀನಾದ ಜನರಿಗೂ ಎದುರಾಗಿತ್ತು. ಚೀನಾದ ಕ್ಸಿಯಾನ್​​ ನಗರದಲ್ಲಿ ರಸ್ತೆಯೊಂದರ ಮೂರು ಮ್ಯಾನ್​​ಹೋಲ್​ಗಳಿಂದ ನೊರೆ ಹೊರಬರುತ್ತಿತ್ತು. ಸುಮಾರು 650 ಅಡಿ ರಸ್ತೆಯುದ್ದಕ್ಕೂ ಬಿಳಿ ನೊರೆ ಆವರಿಸಿ, ಹಿಮಪಾತವಾಗಿದೆಯೇನೋ ಎಂಬಂತೆ ತೋರುತ್ತಿತ್ತು. ಇದರ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಇನ್ನು ಈ ನೊರೆಯನ್ನು ತೆರವುಗೊಳಿಸಲು ಸಿಬ್ಬಂದಿಯನ್ನ ಕರೆಸಲಾಗಿದ್ದು, ಎಷ್ಟು ಸ್ವಚ್ಛ ಮಾಡಿದ್ರೂ ಮತ್ತೆ ನೊರೆ ಏಳುತ್ತಿರುವುದನ್ನು ಕಂಡು ಸಿಬ್ಬಂದಿಯೇ ದಂಗಾಗಿದ್ದರು. ಕೊನೆಗೂ ಸಂಜೆಯ ವೇಳೆಗೆ ಅವರು ರಸ್ತೆಯನ್ನ ಕ್ಲೀನ್ ಮಾಡಿದ್ದಾರೆ. ಮೆಟ್ರೋ ಟನಲ್​​ ನಿರ್ಮಾಣಕ್ಕೆ ಬಳಸುವ ವಸ್ತುವೊಂದರಿಂದ ಈ ನೊರೆ ಎದ್ದಿದೆ. ಇದರಿಂದ ಸಾರ್ವಜನಿಕರಿಗೆ ಯಾವುದೇ ಹಾನಿ ಇಲ್ಲ ಅಂತ ಇಲ್ಲಿನ ಪರಿಸರ ಇಲಾಖೆ ಹೇಳಿದೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv