Going, going, gone.. #GirlwithBalloon ಹರಾಜು ಆಗಿದ್ದೆಷ್ಟಕ್ಕೆ..?

ಪುಟಾಣಿ ಮಗು.. ದಿಲ್ ಆಕಾರದ ಬಲೂನ್ ಹಾರಿಸಿ.. ಒಂದು ಕೈ ಬಲೂನ್​​ನತ್ತ ತೋರಿಸುತ್ತಿರೋ ಚಿತ್ರ ಇದೀಗ ವರ್ಡ್​​ಕ್ರಶ್​.. ನಿಜಕ್ಕೂ ಅದ್ಭುತ..! ಬ್ರಿಟಿಷ್ ಚಿತ್ರಕಾರ ಬಂಕ್ಸಿ ಅವರ ಕೈಚಳಕದಲ್ಲಿ ಅರಳಿದ ಚಿತ್ರದ ಬೆಲೆ ಇಂದು ಕೋಟಿ ಕೋಟಿ.. ನಿನ್ನೆ ಅಮೆರಿಕಾದಲ್ಲಿರುವ ಪ್ರಸಿದ್ಧ ಆರ್ಟ್​ ಡೀಲರ್ ಕಂಪೆನಿ Sothebyನಲ್ಲಿ ಈ ಚಿತ್ರವನ್ನ ಹರಾಜಿಗೆ ಇಡಲಾಗಿತ್ತು. ಇದು ಬರೋಬ್ಬರಿ 1 ಮಿಲಿಯನ್ ಪೌಂಡ್ (9,71,73,280.00)​ಗೆ ಹರಾಜಾಗಿದೆ.

ಇನ್ನು ಬಂಕ್ಸಿ ಅವರು ಬಿಡಿಸಿದ್ದ ಈ ಚಿತ್ರವನ್ನ 2006 ರಲ್ಲಿ Sotheby ಖರೀದಿ ಮಾಡಿತ್ತು. ‘‘Girl with Balloon’’ ಇದು ಬಂಕ್ಸಿ ಅವರ ಅತ್ಯಂತ ಫೇಮಸ್​ ಚಿತ್ರಗಳಲ್ಲಿ ಒಂದಾಗಿದೆ. ಇನ್ನು ತಮ್ಮ ನೆಚ್ಚಿನ ಚಿತ್ರ ಹರಾಜು ಹಿನ್ನೆಲೆಯಲ್ಲಿ ಬಂಕ್ಸಿ ಅವರು ಆ ಚಿತ್ರವನ್ನ ತಮ್ಮ ಇನ್ಸ್​​ಟಾಗ್ರಾಮ್​ ಖಾತೆಯಲ್ಲಿ ‘‘Going, going, gone…’’ ಅಂತಾ ಹಾಕಿಕೊಂಡಿದ್ದರು. ಇದು ಸೊಶೀಯಲ್ ಮಿಡಿಯಲ್ಲಿ ಸಖತ್ ವೈರಲ್ ಆಗಿದೆ.

View this post on Instagram

Going, going, gone…

A post shared by Banksy (@banksy) on