22 ವರ್ಷವಾದ್ರೂ ಪರಿಹಾರ ನೀಡದ ಮೈಸೂರು ಪಾಲಿಕೆಯ ಕಚೇರಿ ‌ಜಪ್ತಿ

ಮೈಸೂರು: ರೈತರೊಬ್ಬರಿಗೆ ಭೂಮಿ ಸ್ವಾಧೀನ ಮಾಡಿಕೊಂಡ ನಂತರ 22 ವರ್ಷಗಳಾದ್ರೂ ಮೈಸೂರು ನಗರ ಪಾಲಿಕೆ ಹಣ ನೀಡಿರಲಿಲ್ಲಾ. ಈ  ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದ ಮೇಲೆ ಇಂದು ಆಯುಕ್ತರ ಕಚೇರಿ ಹಾಗೂ ಆಪ್ತ ಸಹಾಯಕರ ಕಚೇರಿಯ ಎಲ್ಲಾ ಪರಿಕರಗಳನ್ನ ಜಪ್ತಿ ಮಾಡಲಾಗಿದೆ.

ಎಸ್.ಟಿ.ಪಿ. ಯೋಜನೆಗಾಗಿ 22 ವರ್ಷಗಳ ಹಿಂದೆ ಮಹದೇವಸ್ವಾಮಿ ಎಂಬ ರೈತನಿಗೆ ಸೇರಿದ ಸುಮಾರು 14.20 ಎಕರೆ ಭೂಮಿಯನ್ನ  ಮೈಸೂರು ಪಾಲಿಕೆ ವಶಪಡಿಸಿಕೊಂಡಿತ್ತು. ಆದ್ರೆ ಇಂದಿನವರೆಗೂ ಮಹದೇವಸ್ವಾಮಿಗೆ ನೀಡಬೇಕಿದ್ದ 66 ಲಕ್ಷ ರೂಪಾಯಿ ಪರಿಹಾರದ ಹಣವನ್ನ ಪಾಲಿಕೆ ನೀಡಿರಲಿಲ್ಲಾ. ಈ ಕುರಿತು ನ್ಯಾಯಾಲಯದಿಂದ ನಾಲ್ಕೈದು ಬಾರಿ ಆದೇಶ ಬಂದರೂ ಪಾಲಿಕೆ ಆಯುಕ್ತರು   ಕೋರ್ಟಿನ ಆದೇಶಕ್ಕೆ ಕ್ಯಾರೆ  ಎಂದಿರಲಿಲ್ಲ. ಹೀಗಾಗಿ ಇಂದು ಕೋರ್ಟ್ ಆದೇಶದ ಮೇರೆಗೆ ಅಡ್ವೊಕೇಟ್ ಮೂರ್ತಿ ನೇತೃತ್ವದಲ್ಲಿ ಆಯುಕ್ತರ ಕಚೇರಿ ಹಾಗೂ ಆಪ್ತ ಸಹಾಯಕರ ಕಚೇರಿಗಳ ಎಲ್ಲಾ ಪರಿಕರಗಳ ಜಪ್ತಿ ಮಾಡಲಾಗಿದೆ. ಇನ್ನು ಮೈಸೂರು ಪಾಲಿಕೆ ರೈತರಿಗೆ ಸುಮಾರು 8 ಕೋಟಿ ಹಣ ಸಂದಾಯ ಮಾಡಬೇಕಿದೆ ಎನ್ನಲಾಗಿದೆ.


Follow us on

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv