ವಿಶ್ವ ಯೋಗ ದಿನಕ್ಕೆ ಸಜ್ಜಾದ ಅರಮನೆ ನಗರಿ

ಮೈಸೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗ್ತಿದೆ. ಅರಮನೆ ಮುಂಭಾಗ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಮಂದಿ ಯೋಗಾಸನದ ಪೂರ್ವ ತಾಲೀಮು ನಡೆಸಿದರು. ವಿಶ್ವ ಯೋಗ ದಿನಾಚರಣೆ ಅಂಗವಾಗಿ ಹಲವು ಸಂಸ್ಥೆಗಳಿಂದ ಪೂರ್ವ ಯೋಗಾಭ್ಯಾಸ ಪ್ರದರ್ಶನ ನಡೆಯುತ್ತಿದೆ. ಆಯುಷ್ ಇಲಾಖೆ ಮತ್ತು ನೆಹರು ಯುವ ಕೇಂದ್ರ, ಮೈಸೂರಿನ ಯೋಗ ಸಂಸ್ಥೆಗಳ ಸಹಯೋಗದಲ್ಲಿ ತಾಲೀಮು ನಡೆಸಿದರು.

ಕಳೆದ ವರ್ಷ 56 ಸಾವಿರ ಮಂದಿ ಒಂದೇ ಕಡೆ ಯೋಗ ಮಾಡುವುದರ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಿದ್ದರು. ಜೂ.21ರ ವಿಶ್ವ ಯೋಗ ದಿನದಂದು, ಈ ಬಾರಿ 70 ಸಾವಿರಕ್ಕೂ ಹೆಚ್ಚು ಯೋಗಪಟುಗಳನ್ನು ಸೇರಿಸುವ ಚಿಂತನೆ ನಡೆಸಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv