ಹುಬ್ಬಳ್ಳಿ ಹೈದನ ಸಿರಿಧಾನ್ಯದ ಸಿರಿ ಕಲೆಗೆ ಮಾರುಹೋದರು ಮೈಸೂರಿಗರು..!

ಮೈಸೂರು: ದಸರಾ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ರಂಗೇರುತ್ತಿದೆ. ಇನ್ನು, ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್​​ ಮೈಸೂರು ವತಿಯಿಂದ ಆಯೋಜಿಸಿದ ತೋಟಗಾರಿಕಾ ಪ್ರದರ್ಶನ ಎಲ್ಲರ ಕಣ್ಮನ ಸೆಳೆಯಿತು. ಸಿರಿಧಾನ್ಯದಿಂದ ನಾಲ್ವಡಿ ಕೃಷ್ಣರಾಜ ಒಡೆಯರ್​, ಕೊಡಗಿನ ಕಾವೇರಿ, ಸರ್​​.ಎಂ. ವಿಶ್ವೇಶ್ವರಯ್ಯ ಅವರನ್ನು ಸಿರಿಧಾನ್ಯಗಳಿಂದ ಕಲಾಕೃತಿಗಳನ್ನು ನಿರ್ಮಿಸಲಾಗಿದೆ.

ಇನ್ನು, ಸಿರಿಧಾನ್ಯಗಳ ಮೂಲಕ ಕಲಾಕೃತಿ ನಿರ್ಮಿಸಿದ ಹುಬ್ಬಳ್ಳಿಯ ಶಿವಲಿಂಗಪ್ಪ ಎಸ್.​​ ಬಡಿಗೇರ್​ ಫಸ್ಟ್​ನ್ಯೂಸ್​ ಜೊತೆಗೆ ಮಾತನಾಡಿ, ಸಿರಿಧಾನ್ಯಗಳ ಮೂಲಕ ಕಲಾಕೃತಿ ನಿರ್ಮಿಸುವುದು ಒಂದು ವಿಶೇಷ ಕಲೆ. ನಾನು 3-4 ವರ್ಷಗಳಿಂದ ಸಿರಿಧಾನ್ಯಗಳ ಮೂಲಕ ಕಲಾಕೃತಿ ನಿರ್ಮಿಸುತ್ತಾ ಬಂದಿದ್ದೇನೆ. ನನ್ನ ಉದ್ದೇಶ ಜನರಿಗೆ ಸಿರಿಧಾನ್ಯಗಳ ಬಗ್ಗೆ ಅರಿವು ಮೂಡಿಸಲು ನಾನು ಈ ಮೂಲಕ ಪ್ರಯತ್ನಿಸುತ್ತಿದ್ದೇನೆ. ತೋಟಗಾರಿಕೆ ಇಲಾಖೆ ವತಿಯಿಂದ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಕಲಾಕೃತಿಗಳನ್ನು ಸಿರಿಧಾನ್ಯಗಳ ಮೂಲಕ ನಿರ್ಮಿಸುತ್ತೇನೆ. ಉತ್ಸವ, ಸಮಾರಂಭಗಳಲ್ಲಿ 20 ದಿನಗಳ ಕಾಲ ಹಗಲು-ರಾತ್ರಿ ಕೆಲಸ ಮಾಡಿ ಸಿರಿಧಾನ್ಯಗಳಿಂದ ಕಲಾಕೃತಿಗಳನ್ನು ನಿರ್ಮಿಸುತ್ತೇನೆ. ಸಿರಿಧಾನ್ಯಗಳ ಬಳಸುವ ಮೊದಲು ಮೂರ್ತಿಗಳನ್ನು ಪಾಸ್ಟರ್​ ಆಫ್​ ಪ್ಯಾರೀಸ್​ (ಪಿಒಪಿ)ನಿಂದ ಮೂರ್ತಿ ತಯಾರಿಸುತ್ತೇನೆ. ಬಳಿಕ ಮೂರ್ತಿಗೆ ಸಿರಿಧಾನ್ಯಗಳಿಂದ ಅಲಂಕಾರ ಮಾಡಲಾಗುತ್ತದೆ. ಸಿರಿಧಾನ್ಯಗಳಾದ ಸಜ್ಜೆ, ನವಣೆ, ಜೋಳ, ಸಾಸಿವೆಗಳಿಂದ ಮೂರ್ತಿಗಳಿಗೆ ಶೃಂಗಾರ ಮಾಡಲಾಗುವುದು ಎಂದು ಕಲಾಕೃತಿ ನಿರ್ಮಾಣಕಾರ ಲಿಂಗಪ್ಪ ಅವರು ಹೇಳುತ್ತಾರೆ.

ಶಿವಲಿಂಗಪ್ಪ ಎಸ್.​​ ಬಡಿಗೇರ್, ಕಲಾಕೃತಿ ರಚನೆಕಾರ

 

 ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv