ಮೈಸೂರು ದಸರಾ: ಭದ್ರತೆಗೆ ಪೊಲೀಸ್​ ಇಲಾಖೆ ಸಜ್ಜು

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಎರಡು ಹಂತದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ. ಅ. 10 ರಿಂದ 17 ರವರೆಗೆ ಒಂದು ಹಂತ, 18 ಹಾಗೂ 19ರಂದು ಎರಡನೇ ಹಂತದಲ್ಲಿ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಸುಬ್ರಮಣ್ಯೇಶ್ವರ್ ರಾವ್ ಮಾಹಿತಿ ನೀಡಿದ್ದಾರೆ.

ನಗರದ ಖಾಸಗಿ ಹೋಟೆಲ್​ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಟ್ಟು 5831 ಪೊಲೀಸ್ ಸಿಬ್ಬಂದಿಯನ್ನ ನಿಯೋಜನೆ ಮಾಡಿಕೊಳ್ಳಲಾಗಿದೆ. 1600 ಹೋಮ್ ಗಾರ್ಡ್​​​​ಗಳನ್ನು ಸಹ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಮೈಸೂರು ನಗರ ಕಮಾಂಡೊ ಪಡೆಯ 70 ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ. ಕೆಎಸ್ಆರ್​ಪಿ, ಸಿಎಆರ್ , ಡಿಎಆರ್​​ನ ಒಟ್ಟು 57 ತುಕಡಿಗಳನ್ನ ಬಳಸಿಕೊಳ್ಳಲಾಗ್ತಿದೆ ಹಾಗೂ 46 ಭದ್ರತಾ ತಪಾಸಣಾ ಪಡೆಗಳನ್ನ ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ರು.

ಎರಡನೇ ಹಂತದಲ್ಲಿ 10 ಎಸ್​​ಪಿ, 39 ಎಸಿಪಿ, 113 ಪಿಐ, 278 ಪಿಎಸ್ಐ, 391 ಎಎಸ್ಐ, 3096 ಹೆಚ್​ಸಿ ಹಾಗೂ ಪಿಸಿ, 304 ಡಬ್ಲ್ಯೂಪಿಸಿ, 1600 ಹೋಮ್ ಗಾರ್ಡ್ಸ್​​ ಸೇರಿ 5831 ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ. ಸಂಚಾರಿ ವಿಭಾಗದಲ್ಲಿ ಒಬ್ಬರು ಎಸ್​​ಪಿ, 4 ಎಸಿಪಿ, 18 ಪಿಐ, 50 ಪಿಎಸ್ಐ, 130ಎಎಸ್ಐ, 850 ಹೆಚ್​​ಸಿ, ಪಿಸಿ ಸೇರಿ ಒಟ್ಟು 1053 ಸಂಚಾರಿ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ವಿಐಪಿ ಭದ್ರತಾ ದೃಷ್ಠಿಯಿಂದ ಹೊರಗಡೆಯಿಂದ ಎಸ್​​​ಪಿ , ಡಿಸಿಪಿ ಸೇರಿ ಒಟ್ಟು 75 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಕಮಾಂಡೋ ಪಡೆಗಳು, ಬಾಂಬ್ ನಿಷ್ಕ್ರಿಯ ದಳಗಳನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. 30 ಐಬಸ್ ಕಮಾಂಡೋ ಪಡೆ, 40 ಮೈಸೂರು ಕಮಾಂಡೋಪಡೆ, 23 ಡಾಗ್ ಸ್ಕ್ವಾಡ್ ಸಿಬ್ಬಂದಿ, 03 ಬಾಂಬ್ ಡಿಟೆಕ್ಟರ್ ಪಡೆಯನ್ನು ನಿಯೋಜನೆ ಮಾಡಲಾಗಿದೆ. ಅಲ್ಲದೇ ಪ್ರವಾಸಿಗರಿಗೆ ಮಾರ್ಗದರ್ಶನ ನೀಡಲು ನಗರದ ಪ್ರಮುಖ 30 ಸ್ಥಳಗಳಲ್ಲಿ ಪೊಲೀಸ್ ಹೆಲ್ಪ್ ಡೆಸ್ಕ್ ಅಳವಡಿಕೆ ಮಾಡಲಾಗಿದೆ. 16 ಅಗ್ನಿಶಾಮಕದಳ, 17 ಆಂಬುಲೆನ್ಸ್ ಗಳನ್ನು ನಿಯೋಜನೆ ಮಾಡಲಾಗಿದೆ. ಈಗಾಗಲೇ ಇರುವ ಸಿಸಿಟಿವಿಗಳ ಜತೆಗೆ 86 ಹೆಚ್ಚುವರಿ ಸಿಸಿಟಿವಿಗಳನ್ನು ಅಳವಡಿಸಿ ನಿಗಾ ವಹಿಸಲಾಗಿದೆ ಎಂದು ಮಾಹಿತಿ ನೀಡಿದ್ರು.

ವಾಹನ ದಟ್ಟಣೆಯಿಂದಾಗಿ ಬದಲಿ ಮಾರ್ಗ ಸೂಚಿಸಲಾಗಿದೆ. ದಸರಾ ಆರಂಭದಿಂದ ಅಂತ್ಯದ ವರೆಗೆ ಸಂಚಾರಿಮಾರ್ಗದಲ್ಲಿ ಬದಲಾವಣೆ ಮಾಡಲಾಗಿದ್ದು, ಅರಮನೆ ಸುತ್ತಮುತ್ತ, ನ್ಯೂ ಸಯ್ಯಾಜಿ ರಾವ್ ರಸ್ತೆ, ಬಿಎಂ ರಸ್ತೆ, ತ್ಯಾಗರಾಜ ರಸ್ತೆಗಳಲ್ಲಿ ಒನ್ ವೇ ಟ್ರಾಫಿಕ್ ಸಂಚಾರ ವ್ಯವಸ್ಥೆ ಇರುತ್ತದೆ. ಈ ಎಲ್ಲಾ ರಸ್ತೆಗಳಲ್ಲಿ ಹತ್ತು ದಿನಗಳ ಕಾಲ ಪಾರ್ಕಿಂಗ್ ವ್ಯವಸ್ಥೆ ನಿಷೇಧ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv