ಸೌಕರ್ಯ ಕಲ್ಪಿಸದ ಹಿನ್ನೆಲೆ: ಚಿಬುಕಹಳ್ಳಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

ಮೈಸೂರು: ಮೂಲಭೂತ ಸೌಕರ್ಯ ಕಲ್ಪಿಸದ ಹಿನ್ನೆಲೆಯಲ್ಲಿ ಕೆ.ಆರ್.ನಗರ ತಾಲೂಕಿನ ಚಿಬುಕಹಳ್ಳಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದಾರೆ. ಚಿಬುಕನಹಳ್ಳಿ ಗ್ರಾಮ ಸುಮಾರು 628 ಮತಗಳಿವೆ. ಬೆಳಿಗ್ಗೆಯಿಂದಲೂ ಮತದಾನ ಮಂದಗತಿಯಲ್ಲಿ ಸಾಗಿತ್ತು. 12 ಗಂಟೆ ಬಳಿಕ ಮತಗಟ್ಟೆಯತ್ತ ಮತದಾರರು ಬಂದಿಲ್ಲ. ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು ಮತಗಟ್ಟೆ ಬಳಿ‌ ಜಮಾಯಿಸಿ, ಮೂಲಭೂತ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿದರು. ಜನಪ್ರತಿನಿಧಿಗಳು ಬರಬೇಕು ಎಂದು ಪಟ್ಟು ಹಿಡಿದರು. ಆಗ ಗ್ರಾಮಸ್ಥರಿಗೆ ಮತ ಹಾಕುವಂತೆ ಅಧಿಕಾರಿಗಳು ಮನವಿ ಮಾಡಿದರು. ಸಿಬ್ಬಂದಿಗಳ ಮತ್ತು ಪೊಲೀಸರ ಮನವೊಲಿಕೆಯ ಯತ್ನ ವಿಫಲವಾಯಿತು. ಕೆ ಆರ್ ನಗರ ತಾಲೂಕಿನ ಚಿಬುಕನಹಳ್ಳಿ ಗ್ರಾಮ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸೇರಿದೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv