ನನ್ನ ಗೆಲುವಿಗೆ ದೇವೇಗೌಡ್ರು ವರವಾದ್ರು, ಮುದ್ದಹನುಮೇಗೌಡ ಇದ್ರೆ ಕಷ್ಟ ಆಗ್ತಿತ್ತು: ಜಿ.ಎಸ್.ಬಸವರಾಜು

ತುಮಕೂರು: ನನ್ನ ಗೆಲುವಿಗೆ ದೇವೇಗೌಡರು ವರವಾದ್ರು. ಮುದ್ದಹನುಮೇಗೌಡ ಇದ್ದರೆ ಕಷ್ಟ ಆಗೋದು ಅಂತ ಬಿಜೆಪಿ ನೂತನ ಸಂಸದ  ಜಿ.ಎಸ್.ಬಸವರಾಜು ಹೇಳಿದ್ದಾರೆ. ಇಂದು ತುಮಕೂರಿನಲ್ಲಿ ಮಾತನಾಡಿದ ಅವರು, ದೇವೇಗೌಡರು ಬಂದಿದ್ದು ವರವಾಯ್ತು, ನನ್ನ ಗೆಲುವು ಇನ್ನೂ ಸುಲಭವಾಯ್ತು. ಜನ ದೇವೇಗೌಡರನ್ನ ರಿಜೆಕ್ಟ್ ಮಾಡಿದ್ರು ಅಂತ ಹೇಳಿದ್ರು. ಇನ್ನು ಇದೇ ವೇಳೆ ಕೆ.ಎನ್.ರಾಜಣ್ಣ ಬೆಂಬಲ‌ ನೀಡಿದ ವಿಚಾರವಾಗಿ ಮಾತನಾಡಿದ ಬಸವರಾಜು, ಅವರು ನನ್ನ ಸ್ನೇಹಿತರು. ಆದರೆ ರಾಜಣ್ಣ ಅವರ ಪಕ್ಷ ಬಿಟ್ಟು ನನಗೆ ಸಹಾಯ ಮಾಡಿದ್ದಾರೆ ಅನ್ನೋಕಾಗಲ್ಲ. ಎಲ್ಲಾ ಪಕ್ಷದವರು ಮತ ಹಾಕಿದಕ್ಕೆ ನಾನು ಗೆದ್ದಿದ್ದೇನೆ ಎಂದು ಹೇಳಿದ್ರು.

“ಪ್ರಜ್ವಲ್​​ ರಾಜೀನಾಮೆ ನಾಟಕ ಆಡ್ತಿದ್ದಾರೆ”

ಪ್ರಜ್ವಲ್ ರೇವಣ್ಣ ರಾಜಿನಾಮೆ‌‌ ವಿಚಾರವಾಗಿ ಪ್ರತಿಕ್ರಿಯಿಸಿ, ಗೌಡರ ಕುಟುಂಬ ಯಾವತ್ತಾದರೂ ಸತ್ಯ ಹೇಳಿದ್ದು ಇದ್ಯಾ? ದೇವೇಗೌಡರು, ಮೋದಿ ಪ್ರಧಾನಿ ಆದರೆ ದೇಶ ಬಿಡ್ತಿನಿ ಅಂದಿದ್ರು, ಅವರು ದೇಶ ಬಿಟ್ರಾ..? ಮುಸ್ಲಿಂ ಆಗಿ ಹುಟ್ತಿನಿ ಅಂದಿದ್ದಾರೆ, ಈ ಜನ್ಮದಲ್ಲೇ ಮುಸ್ಲಿಂ ಆಗಲಿ. ಪ್ರಜ್ವಲ್ ರೇವಣ್ಣ ರಾಜೀನಾಮೆ ನಾಟಕ ಆಡುತ್ತಿದ್ದಾರೆ. ಜನರ ಸಿಂಪತಿ ಪಡೆಯಲು ಹಾಗೆ ಮಾಡುತ್ತಿದ್ದಾರೆ, ಮೊಮ್ಮಗ ರಾಜೀನಾಮೆ ಕೊಡದೂ ಇಲ್ಲ, ತಾತ ಕೊಡಿಸೋದೂ ಇಲ್ಲ ಅಂತ ವಾಗ್ದಾಳಿ ನಡೆಸಿದ್ರು.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv