ನಾನು ಸಿನಿಮಾ ಪಕ್ಷದವನು: ಸುದೀಪ್​​​

ಬಳ್ಳಾರಿ: ನಟ ಸುದೀಪ್ ಬಳ್ಳಾರಿ ನಗರದ ರೂಪನ ಗುಡಿ ರಸ್ತೆಯಲ್ಲಿ‌ ಭರ್ಜರಿ ಪ್ರಚಾರ ನಡೆಸಿದರು. ಬಳ್ಳಾರಿ ನಗರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಮಶೇಖರ್ ರೆಡ್ಡಿ ಪರ ಮತಯಾಚನೆ ಮಾಡಿದರು. ನಟ ಸುದೀಪ್​​​​​ಗೆ ಸಂಸದ ಶ್ರೀ ರಾಮುಲು ಸಾಥ್ ನೀಡಿದರು. ಈ ವೇಳೆ ಮಾತನಾಡಿದ ಅವರು ರಾಮುಲು ಅವರು ಮುನ್ನುಗ್ಗುತ್ತಿದ್ದಾರೆ. ಸೋಮಶೇಖರ್ ರೆಡ್ಡಿ ಅವರು ಕೂಡ ಕ್ಷೇತ್ರಕ್ಕೆ ಒಳ್ಳೆಯದು ಮಾಡ್ತೀದ್ದಾರೆ ಅವರಿಗೆ ಮತ ನೀಡಿ‌ ಎಂದು ಮನವಿ ಮಾಡಿದರು. ರಾಮುಲು ನನ್ನ ಸಹೋದರ, ನಾನು ಸಿನಿಮಾ ಪಕ್ಷದವನು, ನಿಮ್ಮ ಪ್ರೀತಿ ನನ್ನ ಮೇಲೆ ಇರಲಿ ಎಂದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv