ಬೆಣ್ಣೆನಗರಿಯಲ್ಲಿ ಮುಸ್ಲಿಂ ಬಾಂಧವರಿಂದ ಈದ್ ಮಿಲಾದ್

ದಾವಣಗೆರೆ: ನಾಡಿನಾದ್ಯಂತ ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು. ಇತ್ತ ಮಧ್ಯಕರ್ನಾಟಕ ದಾವಣಗೆರೆಯಲ್ಲಿಯೂ ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಳೆದ ಒಂದು ವಾರದಿಂದಲು ಹಬ್ಬಕ್ಕಾಗಿ ಮುಸ್ಲಿಂ ಬಾಂಧವರು ಫ್ರೀ ಪ್ಲಾನ್ ಮಾಡಿದ್ದು, ಮುಸ್ಲಿಂ ಬಾಂಧವರು ವಾಸಿಸುವ ಪ್ರದೇಶದಲ್ಲಿ ಫ್ಲೆಕ್ಸ್, ಬ್ಯಾನರ್ ಹಾಕಿದ್ದರು‌.

ಇಂದು ಈದ್ ಮಿಲಾದ್ ಹಬ್ಬವಾದ್ದರಿಂದ ಬೃಹತ್ ಮೆರವಣಿಗೆ ನಡೆದಿದ್ದು, ಮೆರವಣಿಗೆಯುದ್ದಕ್ಕೂ ಸಂಭ್ರಮಿಸಿದರು. ಮೆಕ್ಕಾ ಮದೀನಾದ ಸ್ತಬ್ಧ ಚಿತ್ರಗಳನ್ನು ದಾರಿಯುದ್ದಕ್ಕೂ ಕೊಂಡೊಯುತ್ತ ಪ್ರವಾದಿ ಮಹಮ್ಮದ್ ನಬಿ ಅಸ್ಸಲ್ಲ ವಸುಲ್ಲ ಅಂತಾ ಘೋಷಣೆ ಕೂಗಿದರು. ದಾವಣಗೆರೆಯ ಆಜಾದ್ ನಗರ, ಭಾಷಾನಗರ, ಮೆಹಬೂಬ್ ನಗರ, ಮಂಡಕ್ಕಿಭಟ್ಟಿ ಸೇರಿದಂತೆ ಮುಸ್ಲಿಂ ನಿವಾಸಿಗಳ ಪ್ರದೇಶದಲ್ಲಿ ಹಬ್ಬದ ಸಡಗರದ ವಾತಾವರಣ ಜೋರಾಗಿತ್ತು. ಇನ್ನು ಯಾವುದೇ ಅಹಿತಕರ ಘಟನೆ ಜರುಗದಂತೆ ಮೆರವಣಿಗೆಯುದ್ದಕ್ಕು ಪೊಲೀಸ್ ಕಟ್ಟೆಚ್ಚರ ವಹಿಸಿದ್ದು ಕಂಡು ಬಂತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv