ಮಗನಿಗೆ ‘ನರೇಂದ್ರ ಮೋದಿ‘ ಅಂತಾ ಹೆಸರಿಟ್ಟ ಮೇನಾಜ್​ ಬೇಗಂ

ಗೊಂಡಾ(ಊ. ಪ್ರದೇಶ): ದೇಶದಲ್ಲಿ ಕೇವಲ ಚುನಾವಣೆ, ಫಲಿತಾಂಶ ಅನ್ನೋ ಕಾರಣಕ್ಕೆ ಮಾತ್ರ ಮೋದಿ.. ಮೋದಿ.. ಅನ್ನೋ ಹೆಸರು ಕೇಳಿ ಬರುತ್ತಿಲ್ಲ. ಬದಲಾಗಿ ಮೋದಿ ಅನ್ನೋ ವ್ಯಕ್ತಿ ಇದೀಗ ಒಂದು ಶಕ್ತಿಯಾಗಿ ಬೆಳೆದಿದೆಯಾ? ಅನ್ನವ ಪ್ರಶ್ನೆ ಮೂಡುವಂಥ ಪ್ರಸಂಗಗಳು ನಡೆಯುತ್ತಿವೆ. ಈ ಉದ್ದೇಶದಿಂದ ದೇಶದ ಜನತೆ ಧರ್ಮ, ಜಾತಿ, ಪಕ್ಷ ಭೇದ ಮರೆದು ಮತ್ತೊಮ್ಮೆ ಮೋದಿಗೆ ಅಧಿಕಾರವನ್ನು ಅಲಂಕರಿಸಲು ಅವಕಾಶ ನೀಡಿದ್ದಾರೆ. ಇದೀಗ ತಾಜಾ ಸುದ್ದಿಯೊಂದು ವರದಿಯಾಗಿದೆ. ಉತ್ತರ ಪ್ರದೇಶದ ಗೊಂಡಾ ಪ್ರದೇಶದ ಮುಸ್ಲಿಂ ಕುಟುಂಬವೊಂದರ ಸದಸ್ಯರು ತನ್ನ ಮನೆಯ ಹಸುಗೂಸಿಗೆ ನರೇಂದ್ರ ಮೋದಿ ಅಂತಾ ನಾಮಕರಣಮಾಡಿದೆ.

ಹಸುಗೂಸಿನ ತಾಯಿ ಮೇನಾಜ್​ ಬೇಗಂ ಹೇಳುವ ಪ್ರಕಾರ, ‘ನನ್ನ ಮಗ ಮೇ 23ರಂದು ಜನಿಸಿದ. ಆಗ ನಾನು ದುಬೈನಲ್ಲಿ ಕೆಲಸ ಮಾಡುತ್ತಿರುವ ನನ್ನ ಪತಿಗೆ ಕರೆ ಮಾಡಿದೆ. ಆಗ ಅವರು ನರೇಂದ್ರ ಮೋದಿಯವರು ಗೆದ್ರಾ..? ಅಂತಾ ಕೇಳಿದ್ರು. ಹಾಗಾಗಿ ನಾನು ನನ್ನ ಮಗನಿಗೆ ಮೋದಿ ಜೀ ಅವರ ಹೆಸರಿಟ್ಟಿದ್ದೇನೆ. ನನ್ನ ಮಗನೂ ಕೂಡಾ ಮೋದಿ ಜೀ ತರಹ ದೊಡ್ಡ ವ್ಯಕ್ತಿ ಆಗ ಬೇಕು ಹಾಗೂ ಅವರಂತೆ ಒಳ್ಳೆಯ ಕೆಲಸ ಮಾಡಬೇಕು ಅನ್ನೋದು ನನ್ನ ಆಶಯ’ ಅಂತಾ ಅವರು ಹೇಳಿದ್ದಾರೆ.

 


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv