ಮೇ.23 ರ ಬಳಿಕ 24 ಗಂಟೆಯೊಳಗೆ ಮೈತ್ರಿ ಸರ್ಕಾರ ಪತನ-ಮುರುಗೇಶ ನಿರಾಣಿ

ದಾವಣಗೆರೆ: ಮೇ.23 ರ ಬಳಿಕ 24 ಗಂಟೆಯೊಳಗೆ ಮೈತ್ರಿ ಸರ್ಕಾರ ಪತನವಾಗಲಿದೆ ಎಂದು  ದಾವಣಗೆರೆಯಲ್ಲಿ ಮುರುಗೇಶ್ ನಿರಾಣಿ ಹೊಸ ಬಾಂಬ್ ಸಿಡಿಸಿದ್ದಾರೆ. ಮೇ.23 ರಂದು ಕೇಂದ್ರದಲ್ಲಿ ಮೋದಿ ಪ್ರಧಾನಿಯಾಗುತ್ತಾರೆ.  ಲೋಕ ಫಲಿತಾಂಶದ ಬಳಿಕ ಮೈತ್ರಿ ಸರ್ಕಾರ ಮುರಿಯಲಿದ್ದು, ರಾಜ್ಯದಲ್ಲಿ 24 ಗಂಟೆಯೊಳಗೆ ಬಿಜೆಪಿ ಸರ್ಕಾರ ರಚನೆಯಾಗಲಿದೆ. ಖಂಡಿತವಾಗಿಯೂ  ಬಿ ಎಸ್ ಯಡಿಯೂರಪ್ಪ ಸಿಎಂ ಆಗುತ್ತಾರೆ ಎಂದರು. ಅಲ್ಲದೇ, ಕೆಲವು ಶಾಸಕರು ಬಿಜೆಪಿ ಸೇರಲಿದ್ದಾರೆ.  ಹೀಗಾಗಿ ಆಪರೇಷನ್ ಕಮಲ ಅಗತ್ಯವಿಲ್ಲ.  ಲೋಕ ಫಲಿತಾಂಶದ ಬಳಿಕ ರಾಜಕೀಯ ಬದಲಾವಣೆ ಆಗಲಿದೆ.  ಬಿಜೆಪಿ ಸರ್ಕಾರ ರಚನೆ ಗ್ಯಾರಂಟಿ. ಎಂದು ದಾವಣಗೆರೆಯಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ ಭವಿಷ್ಯ ನುಡಿದಿದ್ದಾರೆ..


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv