ಆರ್​ಎಸ್​ಎಸ್, ಬಿಜೆಪಿ ಮುಖಂಡರ ಹತ್ಯೆ ಆರೋಪಿ ಬಂಧನ

ಬೆಂಗಳೂರು: ಆರ್​ಎಸ್​ಎಸ್ ಹಾಗೂ ಬಿಜೆಪಿ ಮುಖಂಡರನ್ನ ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಎನ್ನಲಾಗಿರುವ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಅತೀಕ್ ಶರೀಫ್ ಅಲಿಯಾಸ್ ಟಿಂಬರ್ ಅತೀಕ್ ಬಂಧಿತ ಆರೋಪಿ. ಆರೋಪಿ 2009 ರಿಂದ 2016 ರವರೆಗೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಕರ್ನಾಟಕ ಹಾಗೂ ಮಹಾರಾಷ್ಟ್ರ ಭಾಗದಲ್ಲಿ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.

ಆರೋಪಿ ವಿರುದ್ಧ 2008ರಲ್ಲಿ ನಡೆದ ಬಿಜೆಪಿ‌ ಮುಖಂಡ ಶಶಿಕುಮಾರ್ ಹತ್ಯೆ, 2009ರಲ್ಲಿ ನಡೆದ ಆರ್​ಎಸ್​ಎಸ್ ಲೀಡರ್ ಗಿರಿಧರ್ ಕೊಲೆಯತ್ನ, 2009ರಲ್ಲಿ ಆರ್​ಎಸ್​ಎಸ್ ಮುಖಂಡ ಹರೀಶ್ ಕೊಲೆ ಹಾಗೂ 2009ರಲ್ಲಿ ಆನಂದ್ ಪೈ ಹಾಗೂ ರಮೇಶ್​ರ ಕೊಲೆ ಹಾಗೂ ಕೊಲೆಯತ್ನ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಇದೆ. ಸದ್ಯ ಈ ಎಲ್ಲಾ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ನಡೆಸುತ್ತಿದ್ದಾರೆ.