ತಾಯಿಯನ್ನು ಕೊಂದ ಆರೋಪಿ ಅಂದರ್​

ಹುಬ್ಬಳ್ಳಿ: ಕಳೆದ ಜುಲೈ 4ರಂದು ತಾಯಿ ಮದ್ಯ ಕುಡಿಯಲು ಹಣ ನೀಡಲಿಲ್ಲ ಎಂದು ಕೊಲೆ ಮಾಡಿದ್ದ ಆರೋಪಿಯನ್ನು ಕಲಘಟಗಿ ಪೊಲೀಸರು ಬಂಧಿಸಿದ್ದಾರೆ. ವೀರಭದ್ರಪ್ಪ ನಿಗದಿ ಬಂಧಿತ ಆರೋಪಿ.

ವೀರಭದ್ರಪ್ಪ, ತನ್ನ ತಾಯಿ ಕುಡಿಯಲು ಹಣ ನೀಡಲಿಲ್ಲ ಎಂದು ಕೊಲೆ ಮಾಡಿದ್ದನು ಎಂಬ ಆರೋಪದ ಮೇರೆಗೆ ಪೊಲೀಸರು ಬಂಧಿಸಿದ್ದಾರೆ. ಯಲವದಾಳ ಗ್ರಾಮದ ಮನೆಯಲ್ಲಿ ವೀರಭದ್ರಪ್ಪ ತನ್ನ ತಾಯಿ ಶಂಕ್ರವ್ವನ ನಿಗದಿಯನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದನು ಎನ್ನಲಾಗಿತ್ತು. ಈ ವೇಳೆ ಜಗಳ ಬಿಡಿಸಲು ಬಂದಿದ್ದ ಆತನ ಪತ್ನಿ ಬಸವ್ವಳ ಮೇಲೆಯೂ ಹಲ್ಲೆ ಮಾಡಿದ್ದನು ಎನ್ನಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ, ಕಂಬಿ ಹಿಂದೆ ತಳ್ಳಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.com