ಮೊಬೈಲ್‌ ಕಸಿಯಲು ಬಂದವರಿಂದ ಕೊಲೆ!

ಆನೇಕಲ್ : ಹಣ ಮತ್ತು ಮೊಬೈಲ್ ಕಸಿದುಕೊಳ್ಳಲು ಬಂದ ದುಷ್ಕರ್ಮಿಗಳ ಗ್ಯಾಂಗ್​, ಒರಿಸ್ಸಾ ಮೂಲದ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಇರಿದು ಪರಾರಿಯಾಗಿರೋ ಘಟನೆ ಹೊಸೂರು ಮುಖ್ಯ ರಸ್ತೆಯ ಬೊಮ್ಮಸಂದ್ರ ಸಮೀಪದ ಕೆಎಫ್​ಸಿ ಮಳಿಗೆ ಬಳಿ ನಿನ್ನೆ ರಾತ್ರಿ ನಡೆದಿದೆ.
ಇರಿತಕ್ಕೊಳಗಾದ ಸಮೀರ್(25) ಮೃತಪಟ್ಟಿದ್ದು, ಈತ ಪಿಡ್ಜಾ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದನೆನ್ನಲಾಗಿದೆ. ನಿನ್ನೆ ತಡರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ವೇಳೆ ಬೈಕ್​ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಆಕ್ರಮಣ ಮಾಡಿದ್ದಾರೆ. ಹಣ ಮತ್ತು ಮೊಬೈಲ್​ ಕೊಡಲು ನಿರಾಕರಿಸಿದ ಸಮೀರ್​ನನ್ನು ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಪರಿಣಾಮ ಸಮೀರ್ ಸ್ಥಳದಲ್ಲೇ ಮೃತಪಟ್ಟಿದ್ದು, ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *