ಡಿಸಿ ನಿವಾಸದ ಬಳಿ ಪೌರ ಕಾರ್ಮಿಕರ ಧರಣಿ

ಚಿತ್ರದುರ್ಗ: ನಗರಸಭೆಯ ಹೊರಗುತ್ತಿಗೆ ನೌಕರರು ನಾಲ್ಕು ತಿಂಗಳ ಸಂಬಳ ನೀಡಿಲ್ಲ ಎಂದು ಜಿಲ್ಲಾಧಿಕಾರಿ ನಿವಾಸದ ಎದುರು ಇಂದು ಧರಣಿ ನಡೆಸಿದ್ದಾರೆ.
ನಗರಸಭೆಯಿಂದ ಸಂಬಳವಾಗಿ ನಾಲ್ಕು ತಿಂಗಳು ಕಳೆದ್ರೂ ಒಂದು ರೂಪಾಯಿ ಬಂದಿಲ್ಲ. ನಮ್ಮ ಮಕ್ಕಳ ಶಾಲೆಗೆ ಶುಲ್ಕ ಕಟ್ಟಲೂ ಆಗುತ್ತಿಲ್ಲ. ಅಲ್ಲದೇ ಮನೆ ಬಾಡಿಗೆ ನೀಡಲಾಗದ ದುಸ್ತರ ಸ್ಥಿತಿ ಎದುರಾಗಿದೆ. ನಮಗೆ ಸಂಬಳ ನೀಡಿ ನಮ್ಮ ಸಮಸ್ಯೆಗೆ ಪರಿಹಾರ ಒದಗಿಸಿ ಎಂದು ಪೌರ ಕಾರ್ಮಿಕರು ಧರಣಿ ಕುಳಿತಿದ್ದಾರೆ. ಡಿಸಿ ಮನೆಮುಂದೆ ಧರಣಿ ಕುಳಿತು ಅರ್ಧ ಗಂಟೆ ಕಳೆದರೂ ಜಿಲ್ಲಾಧಿಕಾರಿ ಕ್ಯಾರೆ ಎಂದಿಲ್ಲ. ತಮ್ಮ ಬೇಡಿಕೆ ಈಡೇರುವರೆಗೆ ನಾವು ಧರಣಿ ಕುಳಿತುಕೊಳ್ಳುತ್ತೇವೆ ಎಂದು ಪೌರ ಕಾರ್ಮಿಕರು ಪಟ್ಟು ಹಿಡಿದಿದ್ದಾರೆ.
ಇನ್ನು ಪೌರ ಕಾರ್ಮಿಕರ ಧರಣಿ ಸ್ಥಳಕ್ಕೆ ನಗರಸಭೆ ಪೌರಾಯುಕ್ತ ಚಂದ್ರಪ್ಪ ಭೇಟಿ ನೀಡಿ ಶೀಘ್ರವಾಗಿ ವೇತನ ಬಿಡಿಗೊಡೆಗೊಳಿಸುವ ಭರವಸೆ ನೀಡಿದ್ದಾರೆ. ತಾಂತ್ರಿಕ ಅಡಚಣೆಯಿಂದಾಗಿ ಸಂಬಳ ಆಗುವುದು ವಿಳಂಬ ಆಗಿದೆ. ಇಂದು ಪೌರ ಕಾರ್ಮಿಕರ ಸಂಬಳ ಆಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv