ಶಾರ್ಟ್‌ ಸರ್ಕ್ಯೂಟ್‌: ನಗರಸಭೆಯ ದಾಖಲೆಗಳು ಭಸ್ಮ

ಬಾಗಲಕೋಟೆ: ಶಾರ್ಟ್​ ಸರ್ಕ್ಯೂಟ್​ನಿಂದ ನಗರಸಭೆಯಲ್ಲಿ ಬೆಂಕಿ ಹೊತ್ತಿಕೊಂಡ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ನಡೆದಿದೆ. ಬೆಂಕಿಯ ಕೆನ್ನಾಲಿಗೆ ಕಚೇರಿಯಲ್ಲಿನ ಖುರ್ಚಿ, ಟೇಬಲ್, ಸಿಸಿ ಕ್ಯಾಮೆರಾದ ಡಿವಿಆರ್, ಕಂಪ್ಯೂಟರ್‌ ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ಸಂಬಂಧ ಇಳಕಲ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.