ಅಮೆರಿಕಾದಲ್ಲಿ ಮುಂಬೈ ಹುಡುಗರಿಂದ ಮೈನವಿರೇಳಿಸೋ ಡ್ಯಾನ್ಸ್​..!

ವಿಶ್ವದ ಅತ್ಯಂತ ಪ್ರಸಿದ್ಧ ರಿಯಾಲಿಟಿ ಶೋ ಅನ್ನೋ ಹೆಗ್ಗಳಿಕೆ ಪಡೆದಿರೋ ‘ಅಮೆರಿಕಾ ಹ್ಯಾಸ್​ ಗಾಟ್​ ಟ್ಯಾಲೆಂಟ್’​ ಶೋನಲ್ಲಿ ಹಲವು ಭಾರತೀಯರೂ ಭಾಗವಹಿಸಿ ತಮ್ಮ ಛಾಪು ಮೂಡಿಸಿದ್ದಾರೆ. ಇದೀಗ ಮುಂಬೈನ ಡ್ಯಾನ್ಸ್​ ಗ್ರೂಪ್​ವೊಂದು  ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬೆರಗು ಮೂಡಿಸಿದೆ. 12ರಿಂದ 27 ವರ್ಷದ ಸುಮಾರು 28 ಯುವಕ, ಯುವತಿಯರ ಈ ಡ್ಯಾನ್ಸ್ ತಂಡ ತೀರ್ಪುಗಾರರ ಹಾಗೂ ಪ್ರೇಕ್ಷಕರ ಮನ ಗೆದ್ದಿದೆ. ರಣ್​​ವೀರ್​ ಸಿಂಗ್​ ನಟನೆಯ ಬಾಜಿರಾವ್​ ಮಸ್ತಾನಿ ಚಿತ್ರದ ಮಲ್ಹಾರಿ ಹಾಡಿಗೆ ಡ್ಯಾನ್ಸ್​ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಈ ತಂಡದ ಬಹುಪಾಲು ಸದಸ್ಯರು ಮುಂಬೈನ ಸ್ಲಂನಲ್ಲಿ ವಾಸವಾಗಿದ್ದು, ತಮ್ಮಲ್ಲಿನ ಪ್ರತಿಭೆಯನ್ನ ಇಡೀ ವಿಶ್ವಕ್ಕೆ ತೆರೆದಿಟ್ಟಿದ್ದಾರೆ. ಇವರ ಡ್ಯಾನ್ಸ್ ನೋಡಿ ತೀರ್ಪುಗಾರರು ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ. ಹಲವು ಏಳುಬೀಳುಗಳ ನಡುವೆಯೂ ಉತ್ತಮ ಸಾಧನೆ ಮಾಡಿರುವ ಈ ತಂಡದ ಡ್ಯಾನ್ಸ್ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗ್ತಿದ್ದು. ಫೇಸ್​ಬುಕ್​ ಒಂದರಲ್ಲೇ ಸುಮಾರು 1 ಕೋಟಿಗೂ ಅಧಿಕ ಜನ ವೀಕ್ಷಿಸಿದ್ದಾರೆ.

LEAK: V.Unbeatable – America's Got Talent

There’s a reason their name is V.Unbeatable!See for yourself on the season premiere of America's Got Talent, Tuesday 8/7c on NBC.

Posted by America's Got Talent on Friday, May 24, 2019

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv