‘ಬ್ಲ್ಯಾಕ್​ ಹೋಲ್’​ ಕಥೆ ಹೇಳಿದ ಮುಂಬೈ ಖಾಕಿ..!

ಮುಂಬೈ: ಮೊನ್ನೆ ಬಾಹ್ಯಾಕಾಶದಲ್ಲಿ ನಾಸಾ ವಿಜ್ಞಾನಿಗಳು ರಿಲೀಸ್​ ಮಾಡಿದ್ದ ಬ್ಲ್ಯಾಕ್​ ಹೋಲ್​ ಇಟ್ಕೊಂಡು ಮುಂಬೈ ಪೊಲೀಸರು ಡ್ರಗ್ಸ್​ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಈ ಕುರಿತಾಗಿ ಮುಂಬೈ ಪೊಲೀಸ್​ ಇಲಾಖೆ ತನ್ನ ಟ್ವಿಟರ್​ ಖಾತೆಯಲ್ಲಿ ಒಂದು ಫೋಟೋ ಪೋಸ್ಟ್​ ಮಾಡಿದೆ. ಅದರಲ್ಲಿ ನಾಸಾ ರಿಲೀಸ್​ ಮಾಡಿದ್ದ ಬ್ಲ್ಯಾಕ್​ ಹೋಲ್​ ಫೋಟೋ ಬಳಕೆ ಮಾಡಲಾಗಿದೆ. ಈ ಬ್ಲ್ಯಾಕ್ ಹೋಲ್ ಮತ್ತು ಅದನ್ನು ತಲುಪುವ ಬಿಳಿ ರೇಖೆಯನ್ನ ಎಳೆಯಲಾಗಿದೆ. ಇದರರ್ಥ ಯಾರೂ ಡ್ರಗ್ಸ್​ಗೆ ಮಾರು ಹೋಗಬೇಡಿ. ಒಂದು ವೇಳೆ ಮಾದಕ ವ್ಯಸನದ ಹಿಂದೆ ಬಿದ್ರೆ, ಅದು, ನಿಮ್ಮ ಜೀವನದ ಬ್ಲ್ಯಾಕ್​ ಹೋಲ್​ಗೆ ಕಾರಣವಾಗುತ್ತೆ ಅನ್ನೋ ಅರ್ಥದಲ್ಲಿ ಮುಂಬೈ ಪೊಲೀಸ್ ​ಇಲಾಖೆ ಅರಿವು ಮೂಡಿಸಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಾಣಿಜ್ಯ ನಗರಿಯ ಖಾಕಿ ಕಳಕಳಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.