ನಂಬರ್​ ಪ್ಲೇಟ್​ ಇಲ್ಲದ ಕಾರಿನಲ್ಲಿ ಬಂದ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದೇಕೆ..!?

ಬೀದರ್: ನಂಬರ್​ ಪ್ಲೇಟ್​ ಇಲ್ಲದ ಕಾರಿನಲ್ಲಿ ನಗರದ ಇಂದಿರಾ ಕಾಲನಿಗೆ ಅಗಮಿಸಿದ ಮುಂಬೈ ಪೊಲೀಸರು ಆಫ್ರೀದಿ ಎಂಬಾತನನ್ನು ಬಂಧಿಸಿ ಕರೆದೊಯ್ದಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಸುಮಾರಿಗೆ ಬಂದು ಆಫ್ರೀದಿಯನ್ನು ಬಂಧಿಸಿದ್ದಾರೆ. ಇನ್ನು ಬಂಧನದ ವೇಳೆ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರು ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ, ಅದರಲ್ಲೂ ಮಫ್ತಿಯಲ್ಲಿ ಬಂದಿದ್ದರಿಂದ ಅವರನ್ನ ನಕಲಿ ಎಂದು ತಪ್ಪಾಗಿ ಅರ್ಥೈಸಲಾಗಿತ್ತು. ಇನ್ನು ವಿಚಿತ್ರ ಅಂದ್ರೆ ಇದರ ಬಗ್ಗೆ ಬೀದರ್ ಪೊಲೀಸರಿಗೂ ಯಾವುದೇ ಮಾಹಿತಿ ಇರಲಿಲ್ಲ. ನಂತರ ಸ್ಥಳಕ್ಕೆ ಭೇಟಿ ನೀಡಿದ ಗಾಂಧಿಗಂಜ್ ಪೊಲೀಸರು, ಅವರನ್ನು ಮುಂಬೈ ಪೊಲೀಸರು ಎಂದು ಖಚಿತ ಪಡಿಸಿದ್ದಾರೆ. ಆದ್ರೆ ಆಫ್ರೀದಿಯನ್ನ ಯಾವ ಕಾರಣಕ್ಕೆ ಬಂಧಿಸಲಾಗಿದೆ ಎಂದು ಇನ್ನೂ ತಿಳಿದು ಬಂದಿಲ್ಲ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv