IPLನಿಂದ ಆರ್​ಸಿಬಿ ಬಹುತೇಕ ಔಟ್​.. ಈ ಸಲ ಕಪ್​ ಬರೋದು ಫುಲ್​ ಡೌಟ್​

ಕಿಂಗ್ಸ್​ ಇಲೆವೆನ್ ಪಂಜಾಬ್ ವಿರುದ್ಧ 8 ವಿಕೆಟ್​ಗಳಿಂದ ಭರ್ಜರಿ ಜಯಗಳಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ಲೇ ಆಫ್​ಗೆ ಎಂಟ್ರಿ ಕನಸನ್ನು ಜೀವಂತವಾಗಿರಿಸಿಕೊಂಡಿತ್ತು. ಮುಂದಿನ ಎಲ್ಲಾ ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯ ಟಾಪ್ ನಾಲ್ಕು ತಂಡಗಳಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಮೂಡಿಸಿತ್ತು. ಆರ್​ಸಿಬಿ ಫ್ಯಾನ್ಸ್ ಕೂಡ ಮುಂದಿನ ಎಲ್ಲಾ ಮ್ಯಾಚ್​ಗಳೂ ನಮ್ದೇ ಅಂತಾ ಹೇಳೋಕೆ ಆರಂಭಿಸಿದ್ರು. ಆದ್ರೆ, ನಿನ್ನೆ ಮುಂಬೈನ ವಾಖೆಂಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿಯ ಪ್ಲೇ ಆಫ್​ ಕನಸು ನುಚ್ಚು ನೂರಾಗಿದೆ. ಮುಂಬೈ ವಿರುದ್ಧ 5 ವಿಕೆಟ್​ಗಳಿಂದ ಪಂದ್ಯ ಕೈಚೆಲ್ಲಿದ ಆರ್​ಸಿಬಿ, ಟೂರ್ನಿಯ ಏಳನೇ ಸೋಲನುಭವಿಸಿದೆ. ಈ ಮೂಲಕ ಆರ್​ಸಿಬಿ ಫ್ಲೇ ಆಫ್ ಹಂತ ತಲುಪೋದು ಅಸಾಧ್ಯ ಎಂಬಂತಾಗಿದೆ.

ಇನ್ನುಳಿದ ಎಲ್ಲಾ ಮ್ಯಾಚ್​ ಗೆದ್ರೂ ಪಾಯಿಂಟ್ಸ್, ರನ್​ರೇಟ್​ ​ ಲೆಕ್ಕಾಚಾರದ ಮೇಲೆ ಆರ್​ಸಿಬಿ ಅವಲಂಬಿತವಾಗಿದೆ. ಉಳಿದ ತಂಡಗಳ ಸೋಲುಗಳೇ ಆರ್​ಸಿಬಿಯ ಪ್ಲೇ ಆಫ್ ಕನಸು ಮತ್ತೆ ಚಿಗುರಿಸಬೇಕಿದೆ. ನಿನ್ನೆ ನಡೆದ ಪಂದ್ಯದಲ್ಲೂ ಕೂಡ ಮುಂಬೈ ಇಂಡಿಯನ್ಸ್ ವಿರುದ್ಧ ಆರ್​ಸಿಬಿ 5 ವಿಕೆಟ್​ಗಳ ಸೋಲನುಭವಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ ಎಬಿ ಡಿವಿಲಿಯರ್ಸ್(75) ಹಾಗೂ ಮೋಯಿನ್ ಅಲಿ (50) ನೆರವಿನಿಂದ 171 ರನ್ ಗಳಿಸಿತು. 172 ರನ್​ಗಳ ಉತ್ತಮ ಮೊತ್ತ ಬೆನ್ನತ್ತಿದ ಮುಂಬೈ 19 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 172 ರನ್ ಗಳಿಸಿ ಜಯ ಸಾಧಿಸಿತು.